More

    ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

    ಕೂಡ್ಲಿಗಿ: ವಿಧಾನಸಭಾ ಕ್ಷೇತ್ರದ ಬಹುತೇಕ ಕಡೆ ಶಾಂತಿಯುತ ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಈರಣ್ಣ ಬಿರಾದಾರ್ ತಿಳಿಸಿದ್ದಾರೆ.

    ಬುಧವಾರ ಬೆಳಗ್ಗೆ ಚುನಾವಣಾ ಸಿಬ್ಬಂದಿ ಎಲ್ಲ 245 ಮತ ಕೇಂದ್ರಗಳಲ್ಲಿ ಕಲ್ಪಿತ ಮತದಾನ ಮಾಡಿದ ನಂತರ ಮತದಾನಕ್ಕೆ ಯಂತ್ರಗಳನ್ನು ಸಜ್ಜುಗೊಳಿಸಿದರು. ಆರಂಭದಲ್ಲಿ ಮತಗಟ್ಟೆ ಸಂಖ್ಯೆ 50ರಲ್ಲಿ ಮಾತ್ರ ಕಲ್ಪಿತ ಮತದಾನದ ನಂತರ ಕ್ಲಿಯರ್ ಬಟನ್ ಒತ್ತದ ಕಾರಣ ಮತದಾನವಾಗಿಲ್ಲ.

    ಕೂಡಲೇ ತಾಂತ್ರಿಕ ಅಧಿಕಾರಿಗಳು ಸಮಸ್ಯೆ ಸರಿಪಡಿಸಿದ ಬಳಿಕ ಸುಗಮ ಮತದಾನ ನಡೆಯಿತು. ಬೆಳಗ್ಗೆ 10ಗಂಟೆ ವರೆಗೂ ಮತ ಪ್ರಕ್ರಿಯೆ ನೀರಸವಾಗಿತ್ತು. ನಂತರ ಜನರು ಮತ ಕೇಂದ್ರಗಳಿಗೆ ಆಗಮಿಸಿ ಉತ್ಸಾಹದಿಂದ ಹಕ್ಕು ಚಲಾಯಿಸಿದರು. 11 ಗಂಟೆ ನಂತರ ಬಹುತೇಕರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಯುವ ಮತದಾರರು ಅತ್ಯುತ್ಸಾಹದಿಂದ ಮೊದಲ ಬಾರಿಯ ವೋಟ್ ಹಾಕಿದರು.

    ELECTION

    ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: ವಿದೇಶದಿಂದ ಬಂದು ಮತ ಚಲಾಯಿಸಿದ ಯುವತಿಯರು!

    ಮತಗಂಟೆ ಸಂಖ್ಯೆ 5ರ ಸಾಸಲವಾಡದಲ್ಲಿ ಗೌಡರ ದಾಕ್ಷಾಯಣಮ್ಮ, ಮೊಮ್ಮಕ್ಕಳೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎನ್.ಟಿ.ಶ್ರೀನಿವಾಸ, ತಮ್ಮ ಹುಟ್ಟೂರು ನರಸಿಂಹಗಿರಿ ಮತಗಟ್ಟೆಗೆ ಪತ್ನಿ ಪುಷ್ಪಾ ಜತೆಗೆ ತೆರಳಿ ಹಕ್ಕು ಚಲಾಯಿಸಿದರು.

    ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ. ನಾಯಕ, ಅಜಾದ್ ನಗರದ ಮತಕೇಂದ್ರದಲ್ಲಿ ವೋಟ್ ಹಾಕಿದರು. ಮಧ್ಯಾಹ್ನ 2 ಗಂಟೆ ವೇಳೆಗೆ ಶೇ.47.07 ಮತದಾನವಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು.

    ಚುನಾವಣಾ ಸಿಬ್ಬಂದಿಗೆ ಹೋಳಿಗೆ ಊಟ

    ಚುನಾವಣಾ ಕಾರ್ಯಕ್ಕೆ ಆಗಮಿಸಿರುವ ಸಿಬ್ಬಂದಿಗೆ ಬುಧವಾರ ರಾತ್ರಿ ಚುನಾವಣಾಧಿಕಾರಿ ಈರಣ್ಣ ಬಿರಾದಾರ್ ಅತ್ಯಂತ ಆಸಕ್ತಿ ವಹಿಸಿ ಎಲ್ಲ 245 ಮತಕೇಂದ್ರಗಳ ಸಿಬ್ಬಂದಿಗೂ ಹೋಳಿಗೆ, ಶೀಖರಣೆ, ಚಪಾತಿ, ಪಲ್ಯ, ಅನ್ನ, ಸಾಂಬರ್, ಮಜ್ಜಿಗೆ,ಬಾಳೆಹಣ್ಣು ನಂತರ ತಾಂಬೂಲ ಕೊಟ್ಟು ವಿಶೇಷ ಆತಿಥ್ಯ ನೀಡಿದರು. ಸವಿ ಭೋಜನ ಸವಿದ ಅಧಿಕಾರಿಗಳು, ಇದೇ ಮೊದಲ ಬಾರಿಗೆ ಇಷ್ಟೊಂದು ಕಾಳಜಿ ವಹಿಸಿ ಊಟ ನೀಡಿದ ಚುನಾವಣಾಧಿಕಾರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts