More

    ಕಾಲುವೆಗೆ ಸಮರ್ಪಕವಾಗಿ ನೀರು ಹರಿಸಿ

    ಕುರುಗೋಡು: ತುಂಗಭದ್ರಾ ಮೇಲ್ಮಟ್ಟದ ಮುಖ್ಯ ಕಾಲುವೆಯ 9ನೇ ವಿತರಣಾ ನಾಲೆಗೆ ಸಮರ್ಪಕವಾಗಿ ನೀರು ಹರಿಸಲು ಒತ್ತಾಯಿಸಿ ನೂರಾರು ರೈತರು ಕುಡತಿನಿ ಬಳಿಯ ಎಚ್‌ಎಲ್‌ಸಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

    ರೈತರ ಗದ್ದೆಗಳು ಒಣಗುವ ಸ್ಥಿತಿ

    ಬಾದನಹಟ್ಟಿ, ಸಿದ್ದಮ್ಮನಹಳ್ಳಿ, ಯರಿಂಗಳಿಗಿ ಮತ್ತು ವದ್ದಟ್ಟಿ ಗ್ರಾಮಗಳ ಕೃಷಿ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಅಲ್ಲದೆ ಈ ವರ್ಷ ಮಳೆ ಆಗದಿದ್ದರಿಂದ ಸಂಕಷ್ಟ ಎದುರಾಗಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನೀರು ಪೂರೈಸಲಾಗದೆ ರೈತರ ಗದ್ದೆಗಳು ಒಣಗುವ ಸ್ಥಿತಿಗೆ ಬಂದಿವೆ. ಇಂತಹ ದುಃಸ್ಥಿತಿಯಲ್ಲೂ ಕಾಲುವೆ ನೀರು ಹರಿಸದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಬೆಳೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಲಾಗಿದೆ. ಸಮರ್ಪಕವಾಗಿ ನೀರು ಹರಿಸದಿದ್ದರೆ ಬೆಳೆಗಳು ಕೈ ಸೇರುವುದಿಲ್ಲ. ನೀರು ಕೊಡದಿದ್ದರೆ ರೈತರಿಗೆ ವಿಷ ಕೊಡಿ ಎಂದು ರೈತರು ನೀರಾವರಿ ಇಲಾಖೆ ಅಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: B Dayananda, Bengaluru City Police Commissioner: ಸೈಬರ್ ಕ್ರೈಂ, ಫೇಕ್ ನ್ಯೂಸ್ ಹೇಗೆ ನಿಯಂತ್ರಣ ಮಾಡ್ತೀರಿ?

    ನೀರಾವರಿ ಇಲಾಖೆ ಎಇಇ ರಾಮರೆಡ್ಡಿ ಮಾತನಾಡಿ, ಮಳೆ ಕೊರತೆಯ ಪರಿಣಾಮ ಜಲಾಶಯದಲ್ಲಿ ಸಂಗ್ರಹ ಸಾಮರ್ಥ್ಯ ಕುಸಿಯುತ್ತಿದೆ. ತುಂಗಭದ್ರಾ ಮೇಲ್ಮಟ್ಟದ ಮುಖ್ಯ ಕಾಲುವೆಗೆ ನಿತ್ಯ 1,350 ಕ್ಯೂಸೆಕ್ ಬದಲಿಗೆ 900 ಕ್ಯೂಸೆಕ್ ಹರಿಸಲಾಗುತ್ತಿದೆ. ಇದರಿಂದ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲು ಸಾಧ್ಯವಾಗುತಿಲ್ಲ ಎಂದರು.

    ರೈತರ ಪ್ರತಿಭಟನಾ ಸ್ಥಳಕ್ಕೆ ಶಾಸಕ ಜೆಎನ್.ಗಣೇಶ್ ಭೇಟಿ ನೀಡಿ, ರೈತರು ತುಂಗಭದ್ರಾ ನಿಗಮದ ಕುಡತಿನಿ ವಿಭಾಗದ ಶಾಖಾಧಿಕಾರಿ ಸಂಜೀವಕುಮಾರ್, ಎಇಇ ರಾಮರೆಡ್ಡಿ ಜೊತೆ ನೀರಿನ ಬಿಡುವುದರ ಬಗ್ಗೆ ಕುರಿತು ಚರ್ಚಿಸಿದರು.

    ಪ್ರಸ್ತುತ ಲಭ್ಯವಿರುವ 14 ಕ್ಯೂಸೆಕ್ ನೀರಿನ ಜತೆಗೆ ಹೆಚ್ಚುವರಿಯಾಗಿ 6 ಕ್ಯೂಸೆಕ್ ನೀರು ಬಿಡಲು ತುಂಗಭದ್ರಾ ಮಂಡಳಿ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು. ಆಂಧ್ರಪ್ರದೇಶ ಮೀಸಲು ನೀರಿನಲ್ಲಿ 10 ಕ್ಯೂಸೆಕ್ ಸೇರಿ ಒಟ್ಟು 30 ಕ್ಯೂಸೆಕ್ ನೀರು ಹರಿಸಲು ಸೂಚಿಸಲಾಗುವುದು ಎಂದು ಶಾಸಕ ಗಣೇಶ ಭರವಸೆ ನೀಡಿದರು. ವಿತರಣಾ ನಾಲೆಗೆ ನೀರು ಹರಿಸಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts