More

    ಶೀಘ್ರ ಯಾತ್ರಿ ನಿವಾಸ, ದಾಸೋಹ ಭವನ ಆರಂಭ

    ಕೂಡಲಸಂಗಮ: ಬಸವಾದಿ ಶರಣರ ವಿಚಾರಗಳನ್ನು ಜಗತ್ತಿಗೆ ಭಿತ್ತರಿಸುವ ಉದ್ದೇಶದಿಂದ ಕೂಡಲಸಂಗಮ, ಬಸವನ ಬಾಗೇವಾಡಿ ಹಾಗೂ ಚಿಕ್ಕಸಂಗಮ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಕಾಮಗಾರಿಗಳು ನಡೆದಿವೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ವಿಶೇಷಾಧಿಕಾರಿ ಶಿವಯೋಗಿ ಕಳಸದ ಹೇಳಿದರು.

    ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಸವ ಅಂತಾರಾಷ್ಟ್ರೀಯ ಕೇಂದ್ರದ ಕಾಮಗಾರಿ ನಡೆದಿದ್ದು, ವಿಳಂಬವಾಗದಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಿದೆ. ಮೊದಲ ಹಂತದಲ್ಲಿ 139 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ದೊರತಿದೆ. ತಾಂತ್ರಿಕ ತೊಂದರೆಯಿಂದ ಕೆಲವು ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ ಕೂಡಲೇ ಆರಂಭಿಸುತ್ತೇವೆ ಎಂದರು.

    ಕರೊನಾ ಹರಡುವ ಭೀತಿಯಿಂದ ಯಾತ್ರಿ ನಿವಾಸ ಹಾಗೂ ದಾಸೋಹ ಭವನವನ್ನು ಆರಂಭಿಸಿರಲಿಲ್ಲ, ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಆರಂಭಿಸುತ್ತೇವೆ. ಕೂಡಲಸಂಗಮದಿಂದ ಕೂಡಲಸಂಗಮ ಕ್ರಾಸ್‌ಗೆ ನಿರಂತರ ಸಿಟಿ ಬಸ್ ಹಾಗೂ ಹುನಗುಂದದಿಂದಲೂ ಅಧಿಕ ಬಸ್ ಸುಕ್ಷೇತ್ರಕ್ಕೆ ಬಿಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.

    ನೂತನ ಬಸ್ ಮಾರ್ಗಕ್ಕೆ ಚಾಲನೆ
    ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸಂಗಮೇಶ್ವರ ದೇವಾಲಯ ಹೊರ ಆವರಣದಲ್ಲಿ ಹುನಗುಂದ ಘಟಕದಿಂದ ಕೂಡಲಸಂಗಮ – ಬಸವ ಕಲ್ಯಾಣ ನೂತನ ಮಾರ್ಗದ ಎರಡು ಹೊಸ ಬಸ್‌ಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

    ಒಂದು ಬಸ್ ಬೆಳಗ್ಗೆ 9 ಗಂಟೆಗ ಕೂಡಲಸಂಗಮದಿಂದ ಹೊರಟು ಹುನಗುಂದ, ಇಳಕಲ್ಲ, ಲಿಂಗಸುಗೂರ, ಶಹಾಪುರ, ಕಲಬುರಗಿ ಮಾರ್ಗದ ಮೂಲಕ ಸಂಜೆ 6 ಗಂಟೆಗೆ ಬಸವ ಕಲ್ಯಾಣ ತಲುಪುವುದು. ಇನ್ನೊಂದು ಬಸ್ ಬೆಳಗ್ಗೆ 8 ಗಂಟೆಗೆ ಬಸವ ಕಲ್ಯಾಣದಿಂದ ಹೊರಟು ಸಂಜೆ 6 ಗಂಟೆಗೆ ಕೂಡಲಸಂಗಮ ತಲುಪುವುದು. ಪೂಜಾ ಸಮಾರಂಭದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ರಘ ಎ.ಇ., ಹುನಗುಂದ ಘಟಕದ ವ್ಯವಸ್ಥಾಪಕ ಜಿ.ಬಿ.ಚಿತ್ತವಾಡಗಿ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts