More

    ಕವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್ 16ರಿಂದ

    ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯ ಅಽÃನದ 70ನೇ ಅಂತರ ಮಹಾವಿದ್ಯಾಲಯಗಳ ಬಾಲಕ- ಬಾಲಕಿಯರ ಅಥ್ಲೆಟಿಕ್ ಕ್ರೀಡಾಕೂಟವನ್ನು ಡಿ. 16ರಿಂದ 18ರವರೆಗೆ ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕವಿವಿ ಕುಲಸಚಿವ ಡಾ. ಎ. ಚನ್ನಪ್ಪ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮಹಾವಿದ್ಯಾಲಯದ ಆತಿಥ್ಯದಲ್ಲಿ ನಡೆಯುವ ಕ್ರೀಡಾಕೂಟವನ್ನು ೧೬ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸುವರು. ಏಕಲವ್ಯ ಪ್ರಶಸ್ತಿ ಪುರಸ್ಕೃತ ನಾಗರಾಜ ಬಿ.ಜಿ., ರಾಜ್ಯೋತ್ಸವ ಪುರಸ್ಕೃತ ಖ್ಯಾತ ಕುಸ್ತಿಪಟು ಅಶೋಕ ಏಣಗಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
    ಕವಿವಿ ಅಽÃನದ 70 ಕಾಲೇಜುಗಳ ಅಂದಾಜು ೮೦೦ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವರು. 60 ವಿಧದ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದ್ದು, ಈಗಾಗಲೇ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊ0ಡಿದ್ದಾರೆ. ಬಾಲಕರ ಡೆಕ್‌ಥ್ಲಾನ್, ಬಾಲಕಿಯರ ಹೆಪ್ಟಾಥ್ಲಾನ್, 3,000 ಮೀ. ಸ್ಟೀಪಲ್ ಚೇಸ್ ಹಾಗೂ ಪೋಲ್‌ವಾಲ್ಟ್ ಸ್ಪರ್ಧೆಗಳು ಈ ಬಾರಿಯ ವಿಶೇಷತೆಗಳು. 20 ವರ್ಷಗಳ ನಂತರ ಕರ್ನಾಟಕ ಮಹಾವಿದ್ಯಾಲಯಕ್ಕೆ ಆತಿಥ್ಯ ದೊರೆತಿದ್ದು, ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂದರು.
    ಪ್ರಭಾರ ಕುಲಪತಿ ಪ್ರೊ. ರಾಜೇಂದ್ರ ನಾಯಕ, ಕರ್ನಾಟಕ ಕಾಲೇಜು ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ಜಿಮಖಾನಾ ಉಪಾಧ್ಯಕ್ಷೆ ಡಾ. ಮಂಜುಳಾ ಚಲವಾದಿ, ಡಾ. ಜಗದೀಶ ಕೆ., ಡಿ.ಬಿ. ಗೋವಿಂದಪ್ಪ, ಡಾ. ಮಂಜುನಾಥ ಅಸುಂಡಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts