More

    ಕಿರುತೆರೆ ಕಾರ್ಮಿಕರಿಗೆ ಆಹಾರ ಕಿಟ್ … ಸಹಾಯಹಸ್ತ ಚಾಚಿದ ಕೆಟಿವಿಎ

    ಬೆಂಗಳೂರು: ಹಿರಿತೆರೆಯ ಕಾರ್ಮಿಕರ ನೆರವಿಗೆ ಹಲವರು ಧಾವಿಸಿ ಬಂದಿದ್ದಾರೆ. ಆದರೆ, ನಿಖಿಲ್ ಕುಮಾರ್ ಐದು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದು ಬಿಟ್ಟರೆ, ಮಿಕ್ಕಂತೆ ಕಿರುತೆರೆಯ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದವರು ಕಡಿಮೆಯೇ. ಈಗ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಸಂಸ್ಥೆಯು, ಕಿರುತೆರೆಯ ದಿನಗೂಲಿ ಕಾರ್ಮಿಕರಿಗೆ ಆಹಾರ ಕಿಟ್‌ಗಳನ್ನು ನೀಡುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸಿದೆ.

    ಲಾಕ್‌ಡೌನ್‌ನಿಂದಾಗಿ ಕಿರುತೆರೆಗೆಯ ಹಲವು ಕಲಾವಿದರು ಮತ್ತು ತಂತ್ರಜ್ಞರು ತೊಂದರೆ ಅನುಭವಿಸುತ್ತಿದ್ದಾರೆ. ಹಾಗೆ ಸಂಕಷ್ಟದಲ್ಲಿರುವವರಿಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

    ಕೆಟಿವಿಎ ಅಧ್ಯಕ್ಷ ಶಿವಕುಮಾರ್, ಶ್ರೀನಗರ ಕಿಟ್ಟಿ, ವಿಕ್ರಮ್ ಸೂರಿ, ಶ್ರೀಕಾಂತ್ ಹೆಬ್ಳೀಕರ್, ‘ಮಜಾ ಟಾಕೀಸ್’ ಪವನ್, ನಾರಾಯಣಸ್ವಾಮಿ, ಮೈಕೋ ಮಂಜು … ಸೇರಿದಂತೆ ಹಲವು ಕಲಾವಿದರು ಆಹಾರ ಸಾಮಗ್ರಿಗಳನ್ನು ಪ್ಯಾಕಿ ಮಾಡಿ, ಅವಶ್ಯಕತೆ ಇರುವ ಕಲಾವಿದರು ಮತ್ತು ತಂತ್ರಜ್ಞರಿಗೆ ಕಿಟ್‌ಗಳನ್ನು ವಿತರಿಸಿದ್ದಾರೆ.

    ಡ್ರಾಮಾ ಜೂನಿಯರ್ಸ್​ ಸೀಸನ್​ 4 ಮತ್ತು ಸರಿಗಮಪ ಲಿಟಲ್ ಚಾಂಪ್ಸ್​ ಸೀಸನ್ 18 ಆಡಿಷನ್​ ಶುರು; ಮಕ್ಕಳೇ ನೀವು ಮನೆಯಿಂದಲೇ ಆಡಿಷನ್​ ಕೊಡಬಹುದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts