More

    ಇನ್ಮುಂದೆ ಭಾನುವಾರವೂ ಬಸ್ ಸಂಚಾರ, ರಾತ್ರಿ ವೇಳೆಯೂ ಸಾರಿಗೆ ಸೇವೆ ಲಭ್ಯ

    ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ರಾತ್ರಿವೇಳೆ ಮತ್ತು ಭಾನುವಾರವೂ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ಸಂಚರಿಸಲಿವೆ.

    ಕರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಘೋಷಿಸಿದ್ದ ಸಂಡೇ ಲಾಕ್​ಡೌನ್​ ಮತ್ತು ರಾತ್ರಿ ಕರ್ಫ್ಯೂ ಅನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಹಾಗಾಗಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು ನಿರ್ಬಂಧವಿಲ್ಲದೆ ಸೇವೆ ನೀಡಲಿವೆ.

    ಇದನ್ನೂ ಓದಿರಿ ಅಂಬೇಡ್ಕರ್​ಗೆ ಊಟ ಬಡಿಸಿದ್ದ ಬೆಳಗಾವಿಯ ಅಜ್ಜಿ ಸಿದ್ದವ್ವ ಮೇತ್ರಿ ನಿಧನ

    ಕರೊನಾ ಸೋಂಕು ಹರಡುವ ಭೀತಿಯಿಂದಾಗಿ ರಾಜ್ಯ ಸರ್ಕಾರ ರಾತ್ರಿ 9ರಿಂದ ಬೆಳಗಿನಜಾವ 5ರ ವರೆಗೆ ಹಾಗೂ ಭಾನುವಾರ ಇಡೀ ದಿನ ಕರ್ಫ್ಯೂ ಹೇರಿತ್ತು. ಕರ್ಫ್ಯೂ ಇದ್ದ ಸಂದರ್ಭದಲ್ಲಿ ಸಾರಿಗೆ ಬಸ್​ಗಳ ಸಂಚಾರ ಇರುತ್ತಿರಲಿಲ್ಲ. ಆದರೀಗ, ಎಲ್ಲ ರೀತಿಯ ಕರ್ಫ್ಯೂ ತೆರವು ಮಾಡಿದ ಹಿನ್ನೆಲೆಯಲ್ಲಿ ಈ ಹಿಂದಿನಂತೆ ಬಸ್​ಗಳು ಸಂಚರಿಸಲಿವೆ.

    ಬೆಂಗಳೂರು, ಮೈಸೂರು ಸೇರಿ ರಾಜ್ಯದ ಎಲ್ಲೆಡೆಯೂ ರಾತ್ರಿ ಬಸ್​ ಸಂಚಾರ ಇರಲಿದೆ. ಬಿಎಂಟಿಸಿ ಕೂಡ ರಾತ್ರಿ ಸೇವೆಯನ್ನು ಮುಂದುವರಿಸಲಿದ್ದು, ರಾತ್ರಿ 11 ಗಂಟೆವರೆಗೂ ಸೇವೆ ನೀಡುವ ಸಾಧ್ಯತೆಗಳಿವೆ.

    ಎರಡೂ ನಿಗಮಗಳು ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್​ ಸಂಚಾರಕ್ಕೆ ಅನುವು ಮಾಡಿಕೊಡಲಿವೆ. ಅದರಂತೆ ಕೆಎಸ್​ಆರ್​ಟಿಸಿಯಿಂದ 4 ಸಾವಿರ ಮತ್ತು ಬಿಎಂಟಿಸಿಯ 3 ಸಾವಿರ ಬಸ್​ಗಳು ಸಂಚರಿಸಲಿವೆ.

    ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts