More

    ಕ್ಷಯ ವಿತ್ರರಾಗಿ ನೋಂದಣಿ ಎಲ್ಲರೂ ಮಾಡಿಸಿಕೊಳ್ಳಲಿ

    ಸಂಡೂರು: ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿವವರಿಗೆ ಆಹಾರ ಸಾಮಗ್ರಿ ಕೊಡಿಸಲು ಮುಂದೆ ಬನ್ನಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮನವಿ ಮಾಡಿದರು.
    ತಾಲೂಕಿನ ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ದಾಖಲೆ ಕಾರ್ಡ್‌ಗಳ ಪರಿಶೀಲನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

    ದಾಖಲೆ ಕಾರ್ಡ್‌ಗಳ ಪರಿಶೀಲನಾ ಕಾರ್ಯಕ್ರಮ

    ತೋರಣಗಲ್ ವ್ಯಾಪ್ತಿಯಲ್ಲಿ ಒಟ್ಟು 35ಕ್ಷಯರೋಗಿಗಳು ಇದ್ದಾರೆ. ಇದರಲ್ಲಿ 25 ಶ್ವಾಸಕೋಶದ ಕ್ಷಯರೋಗಿಗಳಿದ್ದು ಉಳಿದ 10 ಜನ ಶ್ವಾಸಕೋಶೇತರ ಕ್ಷಯರೋಗಿಗಳಾಗಿದ್ದಾರೆ. ಒಟ್ಟು 35 ಜನರು ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. 35 ರೋಗಿಗಳಿಗೂ ನಿಕ್ಷಯ ಮಿತ್ರರಿಲ್ಲ. ಅವರಿಗೆ ಪೌಷ್ಟಿಕ ಆಹಾರವೂ ಇಲ್ಲ. 35 ಜನರ ಪೈಕಿ 12 ಜನರ ಬ್ಯಾಂಕ್ ಖಾತೆ ಸಹ ಹೊಂದಾಣಿಕೆಯಾಗದ ಕಾರಣ ಇಲಾಖೆಯ ಸಹಾಯ ಧನ ಅವರಿಗೆ ಜಮೆಯಾಗಿಲ್ಲ. 12 ಜನರಿಗೆ ಬ್ಯಾಂಕ್ ಖಾತೆಯ ದಾಖಲೆಗಳನ್ನು ಸರಿ ಮಾಡಿಸಿಕೊಂಡು ಬರಲು ಸೂಚಿಸಲಾಗಿದೆ.

    ಇದನ್ನೂ ಓದಿ: ಪೌಷ್ಟಿಕಾಹಾರ

    ರೋಗ ಬೇಗ ಗುಣಮುಖವಾಗಲು ಎಲ್ಲ ಕ್ಷಯರೋಗಿಗಳಿಗೆ ದೊರೆಯಬೇಕು. ದಯವಿಟ್ಟು ಸಮುದಾಯ ಮುಂದೆ ಬಂದು ನಿಕ್ಷಯ ಮಿತ್ರರಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಎಲ್ಲರಿಗೂ ಪೌಷ್ಟಿಕಾಹಾರ ಒದಗಿಸಿ ಕ್ಷಯರೋಗಿಗಳಿಗೆ ಆತ್ಮಸ್ಥೈರ್ಯ ತುಂಬಬೇಕು. ಇದೇ ರೀತಿ ಪ್ರತಿ ಸಭೆ ಮತ್ತು ಜಾಗೃತಿ ಕಾರ್ಯಕ್ರಮಗಳಲ್ಲಿ ಮನವಿ ಮಾಡುತ್ತಲೇ ಬರಲಾಗುತ್ತಿದೆ. ಹೃದಯವಂತ ಸಮುದಾಯ ಮುಂದೆ ಬರಬೇಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts