More

    ಮತ್ತೆ ಆಪರೇಷನ್​ ಕಮಲ ಶುರುವಾಗಲಿದೆ, ಬೇಕಿದ್ದರೆ ಕಾದು ನೋಡಲಿ: ಕೆ.ಎಸ್​. ಈಶ್ವರಪ್ಪ

    ಶಿವಮೊಗ್ಗ: ರಾಜ್ಯ ರಾಜಕಾರಣದಲ್ಲಿ ಆಪರೇಷನ್​ ಎಂಬ ಪದ ಹೆಚ್ಚು ಸದ್ದು ಮಾಡುತ್ತಿದ್ದು ಲೋಕಸಭೆ ಚುನಾವಣೆಗೂ ಮುನ್ನ ಅಥವಾ ನಂತರ ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ದಟ್ಟವಾಗಿದೆ.

    ಇತ್ತ ಆಪರೇಷನ್​​ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಲೋಕಸಭೆ ಚುನಾವಣೆಗೂ ಮುನ್ನ ಅಥವಾ ನಂತರ ಕಾಂಗ್ರೆಸ್​ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ದಾರೆ.

    ಈ ಕುರಿತು ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ ಇವರ ಯೋಗ್ಯತೆಗೆ ಇದುವರೆಗೂ ಬಿಜೆಪಿಯ ಒಬ್ಬ ಶಾಸಕನನ್ನೂ ಕರೆದೊಯ್ಯಲು ಆಗಿಲ್ಲ. ಸುಮ್ಮನೇ ಬಿಜೆಪಿಯಿಂದ ತುಂಬಾ ಜನ ಬರುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಿಮಗೆ ಒಂದು ತಿಂಗಳು ಸಮಯ ಕೊಡುತ್ತೇನೆ ಬಿಜೆಪಿಯಿಂದ ಒಬ್ಬ ಶಾಸಕನನ್ನು ನೀವು ಕರೆದೊಯ್ಯಿರಿ ನೋಡೋಣ ಎಂದು ಕಾಂಗ್ರೆಸ್​​ ನಾಯಕರಿಗೆ ಸವಾಲೆಸೆದಿದ್ದಾರೆ.

    ಮತ್ತೆ ಆಪರೇಷನ್​ ಕಮಲ ಶುರುವಾಗಲಿದೆ, ಬೇಕಿದ್ದರೆ ಕಾದು ನೋಡಲಿ: ಕೆ.ಎಸ್​. ಈಶ್ವರಪ್ಪ

    ಇದನ್ನೂ ಓದಿ: FTII ನೂತನ ಅಧ್ಯಕ್ಷರಾಗಿ ನಟ ಮಾಧವನ್​​ ಆಯ್ಕೆ

    ಭೂತದ ಬಾಯಲ್ಲಿ ಭಗವದ್ಗೀತೆ ಬಂದಾಂತಾಗಿದೆ

    ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಕಾಂಗ್ರೆಸ್​ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ವಾಪಸ್​ ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಈಗ ಇದೇ ಕಾಂಗ್ರೆಸ್​​ನವರು ಏಕೆ ಬಿಜೆಪಿ ಶಾಸಕರ ಮನೆ ಕಾಯುತ್ತಿದ್ದಾರೆ. ಕಾಂಗ್ರೆಸ್​ ಸರ್ಕಾರ ಬೀಳಿಸುವ ವಿಚಾರದಲ್ಲಿ ಮತ್ತೆ ಆಪರೇಷನ್​ ಕಮಲ ಶುರುವಾಗಲಿದೆ. ಬೇಕಿದ್ದರೆ ಸಚಿವ ಪ್ರಿಯಾಂಕ ಖರ್ಗೆ ಕಾದು ನೋಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.

    ಸಂಸತ್​ ಸದಸ್ಯತ್ವದಿಂದ ಅನರ್ಹಗೊಂಡಿರುವ ಪ್ರಜ್ವಲ್​ ರೇವಣ್ಣ ಅವರ ವಿಚಾರವನ್ನು ಮುಂದಿಟ್ಟುಕೊಂಡು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ಜನಪ್ರತಿನಿಧಿಗಳು ಈ ರೀತಿ ಆಸ್ತಿ ವಿಚಾರ ಮುಚ್ಚಿಡಬಾರದು ಎಂದಿದ್ದಾರೆ. ಅಕ್ರಮ ಆಸ್ಇ ಗಳಿಕೆಯಲ್ಲಿ ತಿಹಾರ್​ ಜೈಲಿಗೆ ಹೋಗಿ ಬಂದಿರುವ ಅವರು ಈ ರೀತಿ ಬುದ್ದಿಮಾತು ಹೇಳುತ್ತಿರುವುದನ್ನ ನೊಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಾಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts