More

    ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಮುಂದುವರಿದ ಸಂಕಷ್ಟ..!

    ಮುಂಬೈ: ಸೂಕ್ತ ದಾಖಲಾತಿಗಳಿಲ್ಲದೆ ದುಬಾರಿ ವಾಚ್‌ಗಳನ್ನು ತಂದು ಸಿಕ್ಕಿಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಕೃನಾಲ್ ಪಾಂಡ್ಯ ವಿರುದ್ಧ ತನಿಖೆ ಮುಂದುವರಿಸಲು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತೀರ್ಮಾನಿಸಿದೆ. ಸುಮಾರು ಒಂದು ಕೋಟಿ ರೂಪಾಯಿ ಬೆಲೆ ಬಾಳುವ 4 ವಾಚ್‌ಗಳು ಹಾಗೂ ಚಿನ್ನವನ್ನು ಯಾವುದೇ ದಾಖಲಾತಿ ಇಲ್ಲದೆ ಕೃನಾಲ್ ಪಾಂಡ್ಯ ಭಾರತಕ್ಕೆ ತರುತ್ತಿದ್ದರು ಎನ್ನಲಾಗಿದೆ. ಆದರೆ, ಪಾಂಡ್ಯಗೆ ಅನುಮತಿ ನಿಗದಿ ಕುರಿತು ಸೂಕ್ತ ಮಾಹಿತಿ ಇರಲಿಲ್ಲ ಎನ್ನಲಾಗಿದ್ದು, ದಂಡ ಕಟ್ಟಲು ಸಿದ್ಧರಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಪಾಂಡ್ಯ ಮುಂಬೈನಲ್ಲೋ ಅಥವಾ ಬರೋಡ ಮನೆಯಲ್ಲಿ ಇರುವರೋ ಎಂಬುದು ತಿಳಿದು ಬಂದಿಲ್ಲ.

    ಕೃನಾಲ್ ಪಾಂಡ್ಯ ಹಾಗೂ ಅವರ ಸಹೋದರ ಹಾರ್ದಿಕ್ ಪಾಂಡ್ಯ ಇಬ್ಬರೂ ದುಬಾರಿ ಬೆಲೆ ಬಾಳುವ ವಾಚ್‌ಗಳನ್ನು ತೊಟ್ಟಿದ್ದ ಫೋಟೋಗಳನ್ನು ಐಪಿಎಲ್ ವೇಳೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದರು. ಹಾರ್ದಿಕ್ ಪಾಂಡ್ಯ ತೊಡುತ್ತಿದ್ದ ದುಬಾರಿ ಬೆಲೆಯ ವಾಚ್‌ಗಳನ್ನು ಡಿಆರ್‌ಐ ಅಧಿಕಾರಿಗಳು ಇನ್‌ಸ್ಟಾಗ್ರಾಂ ಮೂಲಕ ಗಮನಿಸುತ್ತಿದ್ದರು ಎನ್ನಲಾಗಿದೆ.

    ಕೃನಾಲ್ ಪಾಂಡ್ಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯದ ಕಾರಣ ಆಸ್ಟ್ರೇಲಿಯಾದ ಪ್ರಯಾಣಿಸದೆ ಗುರುವಾರ (ನ.12) ತವರಿಗೆ ವಾಪಸಾಗಿದ್ದರು. ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ 8.8 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಆದರೆ, 109 ರನ್ ಪೇರಿಸಲಷ್ಟೇ ಶಕ್ತರಾದ ಪಾಂಡ್ಯ ಕೇವಲ 6 ವಿಕೆಟ್ ಕಬಳಿಸಿದ್ದರು.

    ಕ್ವಾರಂಟೈನ್‌ನಲ್ಲೇ 9ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಅಶ್ವಿನ್ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts