More

    ಕೆಆರ್​ಎಸ್​ ಹಿನ್ನೀರಿನಲ್ಲಿ ಪೊಲೀಸರಿಂದ ಮೋಜು-ಮಸ್ತಿ- ಭರ್ಜರಿ ಪಾರ್ಟಿ!

    ಮಂಡ್ಯ: ಕೆಆರ್​ಎಸ್​ ಅಣೆಕಟ್ಟೆಯಲ್ಲಿ ಸರ್ಕಾರಿ ಜೀಪ್​ ಅನ್ನು ಖಾಸಗಿ ಯುವಕ ಚಾಲನೆ ವಿವಾದ ಮಾಸುವ ಮುನ್ನವೇ ಶುಕ್ರವಾರ ಮೈಸೂರಿನ ಕರ್ನಾಟಕ ಪೊಲೀಸ್​ ಅಕಾಡೆಮಿ ಸದಸ್ಯರು ತಮ್ಮ ಕುಟುಂಬದೊಂದಿಗೆ ಜಲಾಶಯದ ಹಿನ್ನೀರಿನಲ್ಲಿ ಮೋಜು-ಮಸ್ತಿ ಮಾಡಿರುವುದು ಟೀಕೆಗೆ ಗುರಿಯಾಗಿದೆ.

    ಡ್ಯಾಂನ ಉತ್ತರ ಪ್ರವೇಶದ್ವಾರದ ಹಿನ್ನೀರಿನಲ್ಲಿ ಮತ್ತು ನೀರಿನಿಂದ ಸುಮಾರು 200 ಮೀ. ದೂರದಲ್ಲಿಯೇ ಶಾಮಿಯಾನ ಹಾಕಿಕೊಂಡು ಭೋಜನಕೂಟ, ಕ್ವಿಜ್​, ಆಟೋಟ ಸ್ಪರ್ಧೆ ಮಾಡಲಾಗಿದೆ. 120ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದಾರೆ. ಡಿಜೆ ಹಾಕಿಕೊಂಡು ಮಾಡಿರುವ ಪಾರ್ಟಿಗೆ ಸ್ಥಳೀಯ ಅಧಿಕಾರಿಗಳು ಬ್ರೇಕ್​ ಹಾಕದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿರಿ ಕೆಆರ್​ಎಸ್​ ಡ್ಯಾಂ ಮೇಲೆ ನಿಷೇಧವಿದ್ದರೂ ಪೊಲೀಸ್​ ಜೀಪ್​ನಲ್ಲೇ ದರ್ಬಾರ್​ ನಡೆಸಿದ ಯುವಕ!

    ಪಾರ್ಟಿ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅಕಾಡೆಮಿ ಅಧಿಕಾರಿ ಸುಮನಾ, ನಾವು ಹಿನ್ನೀರಿನ ಬಳಿ ಅನಧಿಕೃತ ಚಟುವಟಿಕೆ ಮಾಡುತ್ತಿಲ್ಲ. ಕುಟುಂಬದ ಸದಸ್ಯರೊಂದಿಗೆ ಒಂದಿಷ್ಟು ಸಮಯ ಕಳೆಯಲು ಬಂದಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.

    ಕೆಆರ್​ಎಸ್​ ಹಿನ್ನೀರಿನಲ್ಲಿ ಪೊಲೀಸರಿಂದ ಮೋಜು-ಮಸ್ತಿ- ಭರ್ಜರಿ ಪಾರ್ಟಿ!ಅಧಿಕಾರ ದುರುಪಯೋಗ?: ಸಾಮಾನ್ಯವಾಗಿ ಡ್ಯಾಂ ಹಿನ್ನೀರಿನಲ್ಲಿ ಪಾರ್ಟಿ ಮಾಡುವುದು ಇರಲಿ, ನಡೆದಾಡುವುದಕ್ಕೂ ಅವಕಾಶವಿಲ್ಲ. ಅದು ನಿರ್ಬಂಧಿತ ಪ್ರವೇಶ. ಹೀಗಿರುವಾಗ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಮೂಲಕ ತಮಗಿಷ್ಟ ಬಂದಂತೆ ನಿಯಮ ಉಲ್ಲಂಘಿಸಿ ಪಾರ್ಟಿ ಆಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯರಿಗೆ ಒಂದು ನ್ಯಾಯ, ಅಧಿಕಾರಿಗಳಿಗೆ ಒಂದು ನ್ಯಾಯವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಈ ಹಿಂದೆ ಇದೇ ಪ್ರದೇಶದ ವ್ಯಾಪ್ತಿಯಲ್ಲಿ ಕೆಲವರು ಪಾರ್ಟಿ ಮಾಡಿದಾಗ ಆಯೋಜಕರು ಹಾಗೂ ಭಾಗವಹಿಸಿದವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಇದೀಗ ಡ್ಯಾಂನ ನಿಷೇಧಿತ ಪ್ರದೇಶದಲ್ಲಿ ಪಾರ್ಟಿ ಮಾಡಿರುವ ಪೊಲೀಸ್​ ಅಧಿಕಾರಿಗಳು, ಸಿಬ್ಬಂದಿಯ ವಿರುದ್ಧವೂ ದೂರು ದಾಖಲಿಸಿ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಕೆಆರ್​ಎಸ್​ ಹಿನ್ನೀರಿನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದಾರೆನ್ನುವ ವಿಷಯದ ಬಗ್ಗೆ ವರದಿ ಸಲ್ಲಿಸುವಂತೆ ಅಪರ ಪೊಲೀಸ್​ ವರಿಷ್ಠಾಧಿಕಾರಿ ಹಾಗೂ ಶ್ರೀರಂಗಪಟ್ಟಣ ತಾಲೂಕು ತಹಸೀಲ್ದಾರ್​ಗೆ ತಿಳಿಸಲಾಗಿದೆ.
    | ಎಸ್​.ಅಶ್ವಥಿ ಜಿಲ್ಲಾಧಿಕಾರಿ

    ಹಾಡಹಗಲೇ ಕೋರ್ಟ್​ ಆವರಣದಲ್ಲಿ ವಕೀಲನ ಬರ್ಬರ ಕೊಲೆ! ಬೆಚ್ಚಿಬಿದ್ದ ಜನತೆ

    ನೀವು ಶಾಸಕರಾದ್ರೆ ನಮಗೇನ್ರಿ? ಸುಮ್ಮನೆ ಹಣ ಕಟ್ಟಿ… ಶಾಸಕನಿಗೆ ಟೋಲ್​ ಸಿಬ್ಬಂದಿ ಧಮ್ಕಿ!

    ಪ್ರೊ.ಭಗವಾನ್​ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾಗೆ ಸಂಕಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts