More

    ತಮಿಳುನಾಡಿಗೆ 26 ಟಿಎಂಸಿ, ಬೆಳೆಗೆ 10 ಟಿಎಂಸಿ?: ಕೆಆರ್‌ಎಸ್ ಡ್ಯಾಂನಿಂದ ನಿಲ್ಲದ ಹೊರಹರಿವು

    ಮಂಡ್ಯ: ತೀವ್ರ ಹೋರಾಟದ ನಡುವೆಯೂ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸುವ ಕೆಲಸವನ್ನು ರಾಜ್ಯಸರ್ಕಾರ ಮಾಡಲಿಲ್ಲ. ಪರಿಣಾಮ ಜೂನ್‌ನಿಂದ ಸುಮಾರು 26 ಟಿಎಂಸಿಯಷ್ಟು ನೀರು ತ.ನಾಡಿಗೆ ಹರಿದು ಹೋಗಿದೆ. ಅಂತೆಯೇ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಬೆಳೆಗೆಂದು ಕೇವಲ 10 ಟಿಎಂಸಿ ನೀರನ್ನು ಹೊರಬಿಡಲಾಗಿದೆ ಎಂದು ತಿಳಿದುಬಂದಿದೆ.
    ಮುಂಗಾರು ಕೈಕೊಟ್ಟಿರುವುದರಿಂದ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಸೋಮವಾರ ಸಂಜೆ ವೇಳೆಗೆ ಡ್ಯಾಂನಲ್ಲಿ 100.83 ಅಡಿ ನೀರಿನ ಸಂಗ್ರಹವಿದೆ. 4,210 ಕ್ಯೂಸೆಕ್ ಒಳಹರಿವಿದ್ದರೆ, 6,163 ಕ್ಯೂಸೆಕ್ ನೀರನ್ನು ಡ್ಯಾಂನಿಂದ ಹೊರಗೆ ಬಿಡಲಾಗುತ್ತಿದೆ. ಕಳೆದೆರೆಡು ದಿನದಿಂದ ಕಾವೇರಿ ಕಣಿವೆಯಲ್ಲಿ ಸ್ವಲ್ಪ ಮಳೆಯಾಗುತ್ತಿದ್ದರೂ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ತ.ನಾಡಿಗೆ ನೀರು ಹರಿಸುತ್ತಲೇ ಇರುವುದು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಮಾತ್ರವಲ್ಲದೆ ನೀರು ಹರಿಸದಂತೆ ನಿರಂತರ ಪ್ರತಿಭಟನೆ ನಡೆಯುತ್ತಿದೆ. ರಾಜ್ಯಸರ್ಕಾರ ಇದೇ ರೀತಿ ನೀರು ಹರಿಸುತಲ್ಲೇ ಇದ್ದರೆ ರಾಜ್ಯದ ಜನರ ಕಥೆ ಏನೆಂದು ಪ್ರಶ್ನಿಸುತ್ತಿದ್ದಾರೆ. ಇರುವ ನೀರಿನಲ್ಲಿಯೇ ಬೆಳೆಗೆ ಹಾಗೂ ನಾಲ್ಕು ಜಿಲ್ಲೆಯ ಜನರಿಗೆ ಮುಂದಿನ ಬೇಸಿಗೆವರೆಗೆ ನೀರು ಕೊಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts