More

    ಸ್ನೇಹಿತರೋ? ಪ್ರೇಮಿಗಳೋ? ಮಾಲ್ಡೀವ್ಸ್​ನಲ್ಲಿ ಪ್ರಭಾಸ್​-ಕೃತಿ ನಿಶ್ಚಿತಾರ್ಥ?

    ಮುಂಬೈ: ಮಾಧ್ಯಮದವರು ತಮ್ತು ಅಭಿಮಾನಿಗಳಿಗೆ ಪ್ರಭಾಸ್​ ಸಿಕ್ಕಾಗಲೆಲ್ಲ ಅವರಿಗೆ ಎದುರಾಗುತ್ತಿದ್ದುದು ಒಂದೇ ಪ್ರಶ್ನೆ ಎಂದರೆ, ಮದುವೆ ಯಾವಾಗ ಎಂದು. ಈ ಪ್ರಶ್ನೆ ಕೇಳಿ ಬಂದಾಗಲೆಲ್ಲ ಪ್ರಭಾಸ್​ ನಾಚಿ ನೀರಾಗುತ್ತಿದ್ದರು. ಮೊದಲು ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್​ ಮದುವೆ ಆಗುತ್ತಿದ್ದಾರೆ ಎಂದು ಸುದ್ದಿಯಾಯಿತು. ಈಗ ಪ್ರಭಾಸ್​ ಮತ್ತು ಕೃತಿ ಸನಾನ್​ ಪ್ರೀತಿಸುತ್ತಿದ್ದಾರೆ ಮತ್ತು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

    ಇದನ್ನೂ ಓದಿ: ನಟ ಸಿದ್ಧಾರ್ಥ್ ಮಲ್ಹೋತ್ರಾ – ನಟಿ ಕಿಯಾರಾ ಅಡ್ವಾನಿ ಭರ್ಜರಿ ಮದುವೆ

    ರಾಮಾಯಣವನ್ನು ಆಧರಿಸಿದ ‘ಆದಿಪುರುಷ್​’ ಚಿತ್ರದಲ್ಲಿ ಪ್ರಭಾಸ್​ ಮತ್ತು ಕೃತಿ, ರಾಮ-ಸೀತೆಯಾಗಿ ಅಭನಯಿಸಿದ್ದಾರೆ. ಚಿತ್ರೀಕರಣ ಸಂದರ್ಭದಲ್ಲೇ ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ, ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ, ಈ ವಿಷಯವನ್ನು ಇಬ್ಬರೂ ನಿರಾಕರಿಸುತ್ತಲೇ ಬಂದಿದ್ದಾರೆ.

    ಈಗ ಸದ್ಯದಲ್ಲೇ ಅವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂಬ ಮಾತೊಂದು ಕೇಳಿ ಬರುತ್ತಿದೆ. ಅದೂ ಇಲ್ಲಲ್ಲ, ದೂರದ ಮಾಲ್ಡೀವ್ಸ್​ನಲ್ಲಿ ಸದ್ಯದಲ್ಲೇ ಪ್ರಭಾಸ್​ ಮತ್ತು ಕೃತಿ ಮದುವೆ ನಡೆಯಲಿದ್ದು, ಇದೇ ವರ್ಷ ಅವರಿಬ್ಬರೂ ಸಪ್ತಪದಿ ತುಳಿಯಲಿದ್ದಾರೆ ಎಂದಬ ಮಾತಿದೆ. ಆದರೆ, ಕೆಲವರು ಅವರ ನಡುವೆ ಇರುವುದು ಪ್ರೀತಿಯಲ್ಲ, ಒಳ್ಳೆಯ ಸ್ನೇಹ ಎಂದು ಹೇಳಿಕೊಂಡೇ ಬಂದಿದ್ದಾರೆ.

    ಇದನ್ನೂ ಓದಿ: ನಟ ಸಿದ್ಧಾರ್ಥ್ ಮಲ್ಹೋತ್ರಾ – ನಟಿ ಕಿಯಾರಾ ಅಡ್ವಾನಿ ಭರ್ಜರಿ ಮದುವೆ

    ಹಾಗಾಗಿ, ಪ್ರಭಾಸ್​ ಮತ್ತು ಕೃತಿ ಪ್ರೇಮಿಗಳೋ? ಅಥವಾ ಬರೀ ಸ್ನೇಹಿತರೋ? ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇದೆ. ಈ ಪ್ರಶ್ನೆಗೆ ಅವರಿಬ್ಬರೇ ಉತ್ತರಿಸಬೇಕು. ಆ ಉತ್ತರ ಯಾವಾಗ ಸಿಗುತ್ತದೋ, ಗೊತ್ತಿಲ್ಲ.

    ಕಬ್ಜ ಚಿತ್ರದಲ್ಲಿ ತಾನ್ಯಾ; ಉಪೇಂದ್ರ ಜತೆ ವಿಶೇಷ ಹಾಡಿನಲ್ಲಿ ಮಿಂಚಲಿರುವ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts