More

    ಕೃಷ್ಣಮೃಗದ ಚರ್ಮ ಮಾರಾಟ

    ಮಂಗಳೂರು: ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ಅಧಿಕಾರಿ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಕೊಪ್ಪಳ ಜಿಲ್ಲೆಯ ಯಾದಗಿರಿಗೆ ತೆರಳಿ ಕೃಷ್ಣಮೃಗದ ಚರ್ಮ ಮಾರಾಟ ಜಾಲವನ್ನು ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳ ಸಹಿತ ಸೊತ್ತುಗಳನ್ನು ಕೊಪ್ಪಳ ವಲಯ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.

    ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹುಣಸಿಹಾಳ್ಯ ಗ್ರಾಮದ ಹುಣಸಿಹಾಳ ತಾಂಡ ನಿವಾಸಿಗಳಾದ ತುಗ್ಲೇಪ್ಪ(37), ಶರಣಪ್ಪ ಅಮರಪ್ಪ ಚೌಹಾಣ(30), ಮಲ್ಲಯ್ಯ ಹೀರೆಮಠ(30), ಶಿವಯ್ಯ ಹಿರೇಮಠ(34), ಸಂಗಪ್ಪ ಕಟ್ಟೀಮನಿ(34), ಹನುಮಂತ ಕಟ್ಟೀಮನಿ(35) ಬಂಧಿತ ಆರೋಪಿಗಳು.
    ಕಾರ್ಯಾಚರಣೆ ವೇಳೆ 20 ಕೃಷ್ಣಮೃಗದ ಚರ್ಮ, 2 ಕೃಷ್ಣ ಮೃಗದ ಟ್ರೋಫಿಯುಳ್ಳ ಕೊಂಬುಗಳು(ತಲೆಯ ಭಾಗ), ಒಂದು ಜೀವಂತ ಮರಿ ಹಾಗೂ ದಂಧೆಗೆ ಬಳಸಿದ ಮೂರು ಬೈಕ್ ಸೇರಿದಂತೆ ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ವಾಧೀನ ಪಡಿಸಿಕೊಂಡ ವಾಹನಗಳ ಮೌಲ್ಯ 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಾರಾಟ ಮಾಡುವ ಉದ್ದೇಶದಿಂದ ಈ ಆರೋಪಿಗಳು ಸೊತ್ತುಗಳನ್ನು ಹೊಂದಿದ್ದರು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.

    ಕಾರ್ಯಾಚರಣೆಯಲ್ಲಿ ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಸಬ್ ಇನ್‌ಸ್ಪೆಕ್ಟರ್ ಪುರುಷೋತ್ತಮ ಎ., ಸಿಬ್ಬಂದಿ ಜಗನ್ನಾಥ ಶೆಟ್ಟಿ, ಪ್ರವೀಣ್ ಜೆ., ಉದಯ ನಾಯ್ಕ, ಮಹೇಶ, ಶಿವಾನಂದ, ಜಗದೀಶ್ ಸಾಲ್ಯಾನ್ ಭಾಗವಹಿಸಿದ್ದರು.

    ಹೇಗಿತ್ತು ಕಾರ್ಯಾಚರಣೆ?: ಯಲಬುರ್ಗಾದಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿ ಅದರ ಚರ್ಮ ಮತ್ತು ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಭಾನುವಾರ ಅಧಿಕಾರಿಗಳ ಸಹಿತ ಸಿಬ್ಬಂದಿ ತಂಡ ಶಿವಮೊಗ್ಗ ಮಾರ್ಗವಾಗಿ ಕೊಪ್ಪಳಕ್ಕೆ ತೆರಳಿದೆ. ಸೋಮವಾರ 4.30ರ ವೇಳೆಗೆ ಆರೋಪಿಗಳು ಬೈಕ್‌ನಲ್ಲಿ ಕೃಷ್ಣಮೃಗದೊಂದಿಗೆ ಗಿರಾಕಿಗಾಗಿ ಕಾಯುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts