More

    ಕೃಷ್ಣಾ ಭೂಸ್ವಾಧೀನ ಅಂದಾಜು ಪ್ರಮಾಣವೇ ದೋಷಪೂರಿತ!

    ಮೃತ್ಯುಂಜಯ ಕಪಗಲ್
    ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನದ್ದೇ ದೊಡ್ಡ ಸವಾಲಾಗಿದೆ. ಈ ಮಧ್ಯೆ ಮುಳುಗಡೆ, ಸ್ಥಳಾಂತರ ಹಾಗೂ ನೀರಾವರಿ ಕಾಲುವೆಗಳ ನಿರ್ವಣಕ್ಕೆ ಅಂದಾಜಿಸಿದ ಭೂಸ್ವಾಧೀನ ಪ್ರಮಾಣವೇ ದೋಷಪೂರಿತ ಎಂಬ ಹೊಸ ಅಂಶ ಹೊರಬಿದ್ದಿದೆ. ತಲರ್ಸ³ಯಾಗಿ ಮರುಸಮೀಕ್ಷೆ ಹಾಗೂ ನಿಖರ ದತ್ತಾಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದರೆ, ಈಗಿನ ಭೂಸ್ವಾಧೀನ ಅಂದಾಜಿನಲ್ಲಿ ಅರ್ಧದಷ್ಟು ತಗ್ಗಲಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿ ಪರಿಷ್ಕೃತ ವರದಿ ತರಿಸಿಕೊಳ್ಳುವುದು ಸೂಕ್ತವೆಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಕೃಷ್ಣಾ 2ನೇ ನ್ಯಾಯಾಧಿಕರಣದ ತೀರ್ಪಿನಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ ಲಭ್ಯವಾದ 166 ಟಿಎಂಸಿ ಅಡಿ (4 ಟಿಎಂಸಿ ಅಡಿ ಜಲಚರಗಳಿಗೆ ಮೀಸಲಿಟ್ಟಿರುವುದು ಹೊರತುಪಡಿಸಿ) ನೀರು ಬಳಕೆಗೆ 1.34 ಲಕ್ಷ ಎಕರೆ ಭೂಸ್ವಾಧೀನದ ಅಗತ್ಯವಿದೆ. ಭೂಸ್ವಾಧೀನ ಪ್ರಕ್ರಿಯೆ ಮುಗಿಸಿದರಷ್ಟೇ ಆಲಮಟ್ಟಿ ಅಣೆಕಟ್ಟೆ ಎತ್ತರ 519ರಿಂದ 523.25 ಮೀಟರ್​ಗೆ ಹೆಚ್ಚಳ ಹಾಗೂ 9 ಏತ ನೀರಾವರಿ ಯೋಜನೆಗಳ ಅನುಷ್ಠಾನದ ಮಾರ್ಗ ಸುಗಮವಾಗಲಿದ್ದು, ಇದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳ 12 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಲಭಿಸಲಿದೆ.

    ಇದನ್ನೂ ಓದಿ: VIDEO: ಸಂಸದೆ ಶೋಭಾ ಕರಂದ್ಲಾಜೆಗೆ ಗಲ್ಫ್ ರಾಷ್ಟ್ರಗಳಿಂದ ಜೀವ ಬೆದರಿಕೆ ಕರೆ!

    ಕೃಷ್ಣಾ ಭೂಸ್ವಾಧೀನ ಅಂದಾಜು ಪ್ರಮಾಣವೇ ದೋಷಪೂರಿತ!ಏರುತ್ತಲೇ ಇದೆ ಮೊತ್ತ: ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ರಚಿತ ಸಮಿತಿ ಎಕರೆ ನೀರಾವರಿ ಭೂಮಿಗೆ 30,000 ರೂ. ಪರಿಹಾರದ ಚಿಂತನೆ ನಡೆಸಿತ್ತು. ಇದರ ಪ್ರಕಾರ, 25,000 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಕಳೆದ 2 ವರ್ಷಗಳಿಂದ ನಿರೀಕ್ಷಿತ ಪ್ರಗತಿಯಾಗದಿದ್ದರೂ ಅಂದಾಜಿಸಿದ ಮೊತ್ತ ಮಾತ್ರ 35,000 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

    ಕಾಯ್ದೆ ರೀತ್ಯ ಸ್ವಾಧೀನ ಪ್ರಕ್ರಿಯೆ ಮುಗಿಸಿ ಪರಿಹಾರ ಧನ ನೀಡಿದರೂ ನಂತರ ರೈತರು ಕೋರ್ಟ್​ಗೆ ಮೊರೆ ಹೋಗಲು ಅವಕಾಶವಿದೆ. ಹೀಗಾದರೆ ರಾಜ್ಯದ ಪಾಲಿನ ನೀರು ಬಳಕೆ, ಯೋಜನೆಗಳ ಅನುಷ್ಠಾನ ಹಾಗೂ ನೀರಾವರಿ ಪ್ರದೇಶ ಸೃಜನೆ ಸಾಧ್ಯವಾಗದು. ಬೊಕ್ಕಸದಿಂದ ಹಣ ಸುರಿಯುತ್ತಲೇ ಇರಬೇಕಾಗುತ್ತದೆ, ಇದರ ಫಲ ಮಾತ್ರ ದಕ್ಕುವುದಿಲ್ಲ ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಾರೆ.

    ಇದನ್ನೂ ಓದಿ: ಇದು ಸಸ್ಪೆನ್ಸ್​: ತುರಿದ ಚೀಸ್​ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!

    ಉನ್ನತಮಟ್ಟದ ಸಭೆ ಇಂದು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬುಧವಾರ ಬೆಳಗ್ಗೆ 11ಕ್ಕೆ ಉನ್ನತಮಟ್ಟದ ಸಭೆ ನಡೆಯಲಿದೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್.ಅಶೋಕ್, ಮಾಧುಸ್ವಾಮಿ ಪಾಲ್ಗೊಳ್ಳಲಿದ್ದಾರೆ.

    ಸಮಿತಿ ರಚನೆ ಸೂಕ್ತ: ರೈತ ಪ್ರತಿನಿಧಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಒಳಗೊಂಡ ಸಮಿತಿ ರಚಿಸಿ ಆ ಮೂಲಕ ಪರಸ್ಪರ ಒಪ್ಪಿತ, ಸೂಕ್ತ ಬೆಲೆ ನಿಗದಿಪಡಿಸಿದರೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಮುಗಿಯುತ್ತದೆ. ಈ ವಿಧಾನ ಆಗು ಮಾಡಬೇಕೆಂದರೆ ಸರ್ಕಾರ ಒಂದಿಷ್ಟು ಕಾನೂನಾತ್ಮಕ ಕಸರತ್ತು ನಡೆಸುವುದು ಅನಿವಾರ್ಯ.

    500 ರೂಪಾಯಿಗೋಸ್ಕರ 30 ಕಿ.ಮೀ. ನಡೆದ ಮಹಿಳೆಗೆ ಸಮಾಜ ನೀಡಿತು ಭರಪೂರ ನೆರವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts