More

    ಕೃಷಿಮೇಳದಲ್ಲಿಂದು ಏನೇನು?

    ರಾಗಿಮುದ್ದೆ, ಬಾಳೆಹಣ್ಣು, ಕಡ್ಲೆಪುರಿ ತಿನ್ನುವ ಸ್ಪರ್ಧೆ. ಬೆ.10

    ಸಮಗ್ರ ಕೃಷಿ ಕುರಿತು ಗೋಷ್ಠಿ. ಮಂಡ್ಯದ ಆರ್ಗ್ಯಾನಿಕ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮಧುಚಂದನ್ ಅವರಿಂದ ‘ಕೃಷಿ ಮಾರುಕಟ್ಟೆ ಸವಾಲುಗಳು’, ಬೆಂಗಳೂರಿನ ಆರ್ಥಿಕ ತಜ್ಞ ವಿದ್ಯಾಶಂಕರ್ ಅವರಿಂದ ‘ಕೃಷಿ ಉತ್ಪನ್ನಗಳ ಆಯಾಮ’, ಬ್ರಹ್ಮಾಕುಮಾರಿ ಸಂಸ್ಥೆಯ ಹಿರಿಯ ಆಧ್ಯಾತ್ಮಿಕ ಚಿಂತಕ ಪ್ರಾಣೇಶ್ ಅವರಿಂದ ‘ಶಾಶ್ವತ ಯೋಗಿಕ ಬೇಸಾಯ’ ಕ್ರಮ ಕುರಿತು ವಿಷಯ ಮಂಡನೆ. ಜಿಎಸ್​ಎಸ್ ಫೌಂಡೇಷನ್ ಸಂಸ್ಥಾಪಕ ಶ್ರೀಹರಿ ಅವರಿಂದ ಪ್ರತಿಕ್ರಿಯೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಧ್ಯಕ್ಷತೆ. ಬೆ.10.

    ಕೃಷಿಗೆ ಪೂರಕ ಕಸುಬುಗಳು ಕುರಿತು ಗೋಷ್ಠಿ. ಹಾಸನ ಆಕಾಶವಾಣಿಯ ಕೃಷಿರಂಗ ವಿಭಾಗದ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ ಅವರಿಂದ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಪ್ರಗತಿಪರ ರೈತ ವಿವೇಕ ಕಾರ್ಯಪ್ಪ ಮತ್ತು ಜ್ಯೂಲಿ ಕಾರ್ಯಪ್ಪ ಅವರಿಂದ ‘ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯ ಮೌಲ್ಯವರ್ಧಿತ ಅಂಶ ಸೇರ್ಪಡೆ ಹೇಗೆ’, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಅವರಿಂದ ‘ಹೈನುಗಾರಿಕೆ ಕೃಷಿ’ ವಿಷಯ ಮಂಡನೆ. ಹಾಸನ ಪ್ರಗತಿ ಪರ ರೈತ ಮಹಿಳೆ ಹೇಮಾ ಅನಂತ್, ಕೆ.ಆರ್.ಪೇಟೆಯ ಪ್ರಗತಿ ಪರ ರೈತ ಮಹಿಳೆ ಪ್ರತಿಕ್ರಿಯೆ. ರಾಜ್ಯ ರೈತ ಮತ್ತು ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಮನು ಸೋಮಯ್ಯ ಅಧ್ಯಕ್ಷತೆ. ಮ.12

    ಸಮಾರೋಪ ಸಮಾರಂಭ. ಪದ್ಮಶ್ರೀ ಡಾ.ಎಂ.ಮಹದೇವಪ್ಪ ಅವರಿಂದ ಸಮಾರೋಪ ಭಾಷಣ. ಅತಿಥಿಗಳು: ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ವಿ.ಶ್ರೀನಿವಾಸ ಪ್ರಸಾದ್, ಪ್ರತಾಪ್ ಸಿಂಹ, ಸುಮಲತಾ, ಪ್ರಜ್ವಲ್ ರೇವಣ್ಣ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ. ಸಂ.4.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts