More

    ಎಫ್​ಡಿಎ ಪ್ರಶ್ನೆಪತ್ರಿಕೆ ಲೀಕ್: 14ಕ್ಕೇರಿದ ಬಂಧಿತರ ಸಂಖ್ಯೆ, 36 ಪುಟಗಳ ಪ್ರಶ್ನೆಪತ್ರಿಕೆ ಸೀಜ್

    ಬೆಂಗಳೂರು: ‌ರಾಜ್ಯಾದ್ಯಂತ ಇಂದು ನಡೆಯಬೇಕಿದ್ದ ಎಫ್​ಡಿಎ ಎಕ್ಸಾಂನ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇದುವರೆಗೂ 14 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಒಟ್ಟು 36 ಪುಟಗಳ ಪ್ರಶ್ನೆ ಪತ್ರಿಕೆಯನ್ನು ಸೀಜ್ ಮಾಡಿದ್ದಾರೆ.

    ಜನರಲ್ ನಾಲೆಡ್ಜ್ ಪತ್ರಿಕೆಯಲ್ಲಿ 85 ಪಶ್ನೆ, ಕನ್ನಡ ವಿಷಯ ಪತ್ರಿಕೆಯಲ್ಲಿ 86 ಪ್ರಶ್ನೆಗಳು ಲೀಕ್ ಆಗಿವೆ. ಪ್ರತಿ ಪ್ರತಿಕೆಯಲ್ಲೂ 100 ಪ್ರಶ್ನೆಗಳು ಇರುತ್ತವೆ. ಆರೋಪಿಗಳ ಬಳಿ ಪ್ರಶ್ನೆಪತ್ರಿಕೆಯ ಮುಖಪುಟ ಹಾಗೂ ಕೊನೆಯ ಪುಟ ಬಿಟ್ಟು ಉಳಿದ ಎಲ್ಲ ಪುಟಗಳೂ ಪತ್ತೆಯಾಗಿವೆ. ಒಟ್ಟು 36 ಪುಟಗಳ ಪ್ರಶ್ನೆಪತ್ರಿಕೆಯನ್ನು ಸಿಸಿಬಿ ಸೀಜ್​ ಮಾಡಿದೆ. ಇದನ್ನೂ ಓದಿರಿ ಎಫ್​ಡಿಎ ಪ್ರಶ್ನೆಪತ್ರಿಕೆ ಲೀಕ್ ಮಾಡಿದ್ದೇ ಕೆಪಿಎಸ್​ಸಿಯ ಓರ್ವ ಆಫೀಸರ್​! ಲೀಕಾಸುರನ ಕರಾಳ ಮುಖ ಬಿಚ್ಚಿಟ್ಟಿದ್ದೀವಿ ನೋಡಿ

    ಎಫ್​ಡಿಎ ಪ್ರಶ್ನೆಪತ್ರಿಕೆ ಲೀಕ್: 14ಕ್ಕೇರಿದ ಬಂಧಿತರ ಸಂಖ್ಯೆ, 36 ಪುಟಗಳ ಪ್ರಶ್ನೆಪತ್ರಿಕೆ ಸೀಜ್
    ಆರೋಪಿಗಳಾದ ಚಂದ್ರು, ರಾಚಪ್ಪ.

    ಉಲ್ಲಾಳದ ಅಪಾರ್ಟ್​ಮೆಂಟ್​ವೊಂದರ ನಿನ್ನೆ ದಾಳಿ ಮಾಡಿದ್ದ ಸಿಸಿಬಿ, ಪ್ರಶ್ನೆಪತ್ರಿಕೆ ಮತ್ತು ಲಕ್ಷಾಂತರ ರೂಪಾಯಿ ಸಮೇತ ಪ್ರಮುಖ ಆರೋಪಿಗಳಾದ ಚಂದ್ರು ಮತ್ತು ರಾಚಪ್ಪ ಎಂಬುವರನ್ನ ಬಂಧಿಸಲಾಗಿದೆ. ಇವರ ವಿಚಾರಣೆ ಬಳಿಕ ಮತ್ತೆ 12 ಜನರನ್ನು ಬಂಧಿಸಲಾಗಿದೆ. ಒಟ್ಟು 14 ಆರೋಪಿಗಳ ಬಳಿ 35 ಲಕ್ಷ ಹಣ ಮತ್ತು ನಾಲ್ಕು ಕಾರು, ಅವರ ಬಳಿಯಿದ್ದ ಜನರಲ್‌ ನಾಲೆಡ್ಜ್ ಹಾಗೂ ಕನ್ನಡ ವಿಷಯಗಳ ಪತ್ರಿಕೆಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ.

    ಆರೋಪಿಗಳಿಗೆ ಪ್ರಶ್ನೆಪತ್ರಿಕೆ ಎಲ್ಲಿಂದ ಬಂತು? ಯಾರೆಲ್ಲ ಇವರ ಸಂಪರ್ಕದಲ್ಲಿ ಇದ್ದಾರೆ? ಅನ್ನೋದರ ಬಗ್ಗೆ ತನಿಖೆ ಮುಂದುವರಿಸಿದ್ದೇವೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್‌ ಪಾಟೀಲ್ ತಿಳಿಸಿದ್ದಾರೆ.

    ಕೆಪಿಎಸ್​ಸಿ ಕಚೇರಿಯ ಇಬ್ಬರು ಸಿಬ್ಬಂದಿ ಮೇಲೆ ಸಿಸಿಬಿಗೆ ಅನುಮಾನವಿದ್ದು, ಶಂಕಿತರ ಫೋನ್ ಸ್ವಿಚ್ ಆಫ್ ಆಗಿದೆ. ಕೆಪಿಎಸ್​ಸಿ ಕಚೇರಿಯ ಕೆಲ ಅಧಿಕಾರಿಗಳನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಈ ಪ್ರಕರಣ ಬಗೆದಷ್ಟೂ ಆಳ ಎಂಬಂತಾಗಿದ್ದು, ತನಿಖೆ ಮುಂದುವರಿದಂತೆ ಲೀಕಾಸುರರ ಜಾಲ ಪತ್ತೆಯಾಗುತ್ತಲೇ ಇದೆ.

    ಎಫ್​ಡಿಎ ಪ್ರಶ್ನೆಪತ್ರಿಕೆ ಲೀಕ್ ಮಾಡಿದ್ದೇ ಕೆಪಿಎಸ್​ಸಿಯ ಓರ್ವ ಆಫೀಸರ್​! ಲೀಕಾಸುರನ ಕರಾಳ ಮುಖ ಬಿಚ್ಚಿಟ್ಟಿದ್ದೀವಿ ನೋಡಿ

    ಧಾರವಾಡದಲ್ಲಿ ಭೀಕರ ಅಪಘಾತ: ಸಾವಿಗೂ ಮುನ್ನ ಬಾಲ್ಯ ಸ್ನೇಹಿತೆಯರ ಸುಂದರ ಕ್ಷಣಗಳ ಎಕ್ಸ್​ಕ್ಲೂಸಿವ್​ ವಿಡಿಯೋ ಇಲ್ಲಿದೆ​

    ಪತ್ನಿಯ ಕೊಲೆಗೆ ಕೆಎಎಸ್ ಅಧಿಕಾರಿ ಸಂಚು! ಕಾರಣ ಕೇಳಿದ್ರೆ ಹೌಹಾರುತ್ತೀರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts