More

    ಕೀಡೆಗಳಿಂದ ಸಮಾಜದಲ್ಲಿ ಸೌಹಾರ್ದ ಸಾಧ್ಯ: ಗ್ರಾಪಂ ಪಿಡಿಒ ಉಮಾಪತಿ ಅಭಿಪ್ರಾಯ

    ಕೊಟ್ಟೂರು: ಗ್ರಾಮೀಣ ಕ್ರೀಡೆಗಳು ಆ ಪ್ರದೇಶದ ಸಂಸ್ಕೃತಿ-ಚರಿತ್ರೆ ಭಾಗವಾಗಿದೆ. ಬದಲಾದ ಕಾಲಮಾನದಲ್ಲಿ ಒಂದೊಂದೇ ಕ್ರೀಡೆಗಳು ಮರೆಯಗುತ್ತಿವೆ ಎಂದು ರಾಂಪುರ ಗ್ರಾಪಂ ಪಿಡಿಒ ಉಮಾಪತಿ ಕಳವಳ ವ್ಯಕ್ತಪಡಿಸಿದರು.

    ರಾಂಪುರದಲ್ಲಿ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಕ್ರೀಡೆಗಳು ಮನರಂಜನೆ ಜೊತೆಗೆ ದೈಹಿಕ-ಮಾನಸಿಕ ಸದೃಢ ಹೆಚ್ಚಿಸುತ್ತವೆ. ಸಮಾಜದಲ್ಲಿ ಸೌಹಾದ ತರುತ್ತದೆ ಎಂದರು. ಗ್ರಾಪಂ ಅಧ್ಯಕ್ಷ ಮಹಾದೇವಿ, ಉಪಾಧ್ಯಕ್ಷ ಹುಲಿಗಮ್ಮ ಬಸವರಾಜ್, ಸದಸ್ಯರಾದ ನಾಗರಾಜ್ ಅಂಗಡಿ, ಗಂಗಮ್ಮ ನಾಗರಾಜ್, ಅನುಸೂಯಮ್ಮ ಭರಮಲಿಂಗಪ್ಪ, ಮುಂತಾದವರಿದ್ದರು.

    ಪಂದ್ಯಾವಳಿಯಲ್ಲಿ ರಾಂಪುರ, ಹೊಸಕೋಡಿಹಳ್ಳಿ, ಸುಟ್ಟಕೋಡಿಹಳ್ಳಿ, ಬೋರನಹಳ್ಳಿ, ಸುಂಕದಕಲ್ಲು, ಜಾಗಟಗೆರೆ ಗ್ರಾಮದ ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ ರಾಂಪುರ, ದ್ವಿತೀಯ ಬಹುಮಾನ ಜಾಗಟಗೆರೆ, ತೃತೀಯ ಬಹುಮಾನ ಸುಟ್ಟಕೋಡಿಹಳ್ಳಿ ತಂಡಗಳು ತಮ್ಮದಾಗಿಸಿಕೊಂಡವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts