More

    ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಹೆಮ್ಮೆ ಪಡಬೇಕು, ಕೊಟ್ಟೂರೇಶ್ವರ ಕಾಲೇಜು ವ್ಯವಸ್ಥಾಪಕ ಸಿದ್ದರಾಮ ಕಲ್ಮಠ ಅನಿಸಿಕೆ

    ಕೊಟ್ಟೂರು: ಕನ್ನಡ ಭಾಷೆ ಮತ್ತು ಸಂಸ್ಕೃತಿ ಸಮ್ಮಿಳಿತವಾಗಿದೆ. ಒಮ್ಮೆ ಕನ್ನಡ ಸಂಸ್ಕೃತಿಗೆ ಮಾರು ಹೋದವರು, ಭಾಷೆಯನ್ನು ಕಲಿತವರು ಎಂದಿಗೂ ಮರೆಯಲಾರರು ಅಷ್ಟೊಂದು ಗಟ್ಟಿ ಭಾಷೆ, ಸಂಸ್ಕೃತಿ ಕನ್ನಡನಾಡಿನದ್ದು ಎಂದು ಹೇಳಲು ನಾವೆಲ್ಲರೂ ಹೆಮ್ಮೆ ಪಡಬೇಕು ಎಂದು ಕೊಟ್ಟೂರೇಶ್ವರ ಕಾಲೇಜ್ ವ್ಯವಸ್ಥಾಪಕ ಹಾಗೂ ನಿಕಟಪೂರ್ವ ಕಸಾಪ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

    ವೀರಶೈವ ವಿದ್ಯಾವರ್ಧಕ ಸಂಘ ಬಳ್ಳಾರಿ ಮತ್ತು ಕೊಟ್ಟೂರೇಶ್ವರ ಪದವಿ ಕಾಲೇಜ್‌ನ ಡಾ. ರಾಜ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡೋತ್ಸವ ಹಾಗೂ ಕನ್ನಡ ನಾಡು, ನುಡಿ ಚಿಂತನಾ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡ ಭಾಷೆ ಅನಾದಿಕಾಲದಿಂದ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡು ಬೆಳೆದು ಬಂದಿದೆ. ಪಂಪ, ರನ್ನ, ಪೊನ್ನ, ನಾಗಚಂದ್ರ ಕಾಲದಲ್ಲಿ ಅತ್ಯಂತ ಉತ್ಕೃಷ್ಟವಾದ ಸಾಹಿತ್ಯ ರಚನೆಯಾಗಿದ್ದು, ಆ ಕಾವ್ಯಗಳು ಕನ್ನಡ ನಾಡಿನ ಸಂಸ್ಕೃತಿ ಹಿರಿಮೆಗೆ ಕನ್ನಡಿಯಾಗಿವೆ. ನಮ್ಮ ಮಾತೃ ಭಾಷೆ ಹೆತ್ತ ತಾಯಿಯಷ್ಟೇ ಶ್ರೇಷ್ಟ. ಆದ್ದರಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳಸಬೇಕಾದರೆ, ನಾವೆಲ್ಲರೂ ಸದಾ ಕನ್ನಡ ಭಾಷೆ ಮಾತನಾಡಬೇಕು. ಕನ್ನಡ ದಿನಪತ್ರಿಕೆಗಳನ್ನು ಓದಬೇಕು. ಕನ್ನಡ ಸಿನಿಮಾಗಳನ್ನು ನೋಡಬೇಕು ಎಂದು ಅಭಿಪ್ರಾಯಪಟ್ಟರು.

    ಪಶು ವೈದ್ಯ ಇಲಾಖೆ ಉಪ ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ಕಲಾವಿದ ಡಾ.ಬೆಣ್ಣೆ ಬಸವರಾಜ, ಕನ್ನಡ ಭಾಷೆಗೆ ಸರಿಸಾಟಿಯಾದ ಮತ್ತೊಂದು ಭಾಷೆ ಇಲ್ಲ. ಕನ್ನಡ ವಿಶ್ವದಲ್ಲಿಯೇ ಶ್ರೇಷ್ಟವಾದ ಭಾಷೆ, ನಾನು ಹಾಸ್ಯವನ್ನು ಕಲಿತಿದ್ದು ಕನ್ನಡವನ್ನು ಹೆಚ್ಚು ಓದುವ ಮೂಲಕ ಎಂದರು.

    ಸಂಗೀತಗಾರ ಹಡಗಲಿಯ ಪ್ರಕಾಶ್ ಜೈನ್ ಹಾಡಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಕೊಟ್ಟೂರೇಶ್ವರ ಪದವಿ ಕಾಲೇಜ್ ಪ್ರಾಚಾರ್ಯ ಶಾಂತಮೂರ್ತಿ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕುಸುಮಾ ಸಜ್ಜನ್ ಸ್ವಾಗತಿಸಿದರು. ವಿಜಯಲಕ್ಷ್ಮೀ ನಿರ್ವಹಿಸದಿರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts