More

    ಕಲೆಯು ಎಲ್ಲರಿಗೂ ಸಿದ್ಧಿಸುವುದಿಲ್ಲ, ಪ್ರೋ.ಶಾಂತಮೂರ್ತಿ ಕುಲಕರ್ಣಿ ಅಭಿಮತ

    ಕೊಟ್ಟೂರು: ಕಲಾವಿದರು ಕಲೆಯ ತಪಸ್ವಿಗಳಿದ್ದಂತೆ. ಕಲೆಯು ಎಲ್ಲರಿಗೂ ಸಿದ್ಧಿಸುವುದಿಲ್ಲ. ಸಿದ್ಧಿಸಿದವರು ಕಿನ್ನರ-ಕಿಂಪುರುಷರಷ್ಟೇ ಶ್ರೇಷ್ಠ ಎಂದು ಪ್ರೋ.ಶಾಂತಮೂರ್ತಿ ಕುಲಕರ್ಣಿ ಹೇಳಿದರು.

    ಪಟ್ಟಣದಲ್ಲಿ ಕೊಟ್ಟೂರೇಶ್ವರ ಪದವಿ ಕಾಲೇಜ್‌ನ ಡಾ. ರಾಜ್ ಸಭಾ ಭವನದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು, ಶ್ರೀಗುರು ಕೊಟ್ಟೂರೇಶ್ವರ ಮಹಾವಿದ್ಯಾಲಯ ಹಾಗೂ ಸ್ಥಳೀಯ ಕಲ್ಪತರು ಕಲಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ನೃತ್ಯೋವಕ್ಕೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕ ರಾಜ್ಯೋತ್ಸವ ಹಾಗೂ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತೆ ರಂಗಭೂಮಿ ಕಲಾವಿದೆ ಕೂಡ್ಲಿಗಿ ಪದ್ಮ, ರಂಗಭೂಮಿಯ ಮತ್ತು ಸಿನಿಮಾಗಳಲ್ಲಿನ ಎಲ್ಲ ಬಗೆಯ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿ ಪ್ರೇಕ್ಷರಿಂದ ಮೆಚ್ಚುಗೆಗಳಿಸುವ ಮೂಲಕ ಆತ್ಮತೃಪ್ತಿಹೊಂದಿದ್ದೇನೆ ಎಂದರು.

    ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟಾರ್ ಎಸ್.ಎಚ್.ಶಿವರುದ್ರಪ್ಪ, ಈ ಭಾಗವು ಪ್ರಾಚೀನ ಕಾಲದಿಂದಲೂ ವಿವಿಧ ಕಲೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡಿ ಉತ್ತೇಜಿಸಿರುವುದಕ್ಕೆ ಅನೇಕ ನಿದರ್ಶನಗಳಿವೆ ಎಂದು ಮೆಚ್ಚಿಗೆ ಸೂಚಿಸಿದರು.

    ನಾಟಕ ಅಕಾಡಮಿ ಮಾಜಿ ನಿರ್ದೇಶಕ ರಾಜರಾಂ, ಹೊಸಪೇಟೆಯ ಭರತ ನಾಟ್ಯ ಕಲಾಕೇಂದ್ರದ ಅಧ್ಯಕ್ಷೆ ಡಾ. ಎಸ್.ಅಂಜಲಿ, ತಮ್ಮ ನಾಟ್ಯಕೇಂದ್ರದ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ನೃತ್ಯಕಲೆಯನ್ನು ಕಲಿಸುವ ಮೂಲಕ ದೇಶದ ನಾನಾ ಕಡೆ ಪ್ರದರ್ಶನ ನೀಡಿದ್ದಾರೆ. ಸರ್ಕಾರ ಇವರನ್ನು ಸಂಗೀತ ನೃತ್ಯ ಅಕಾಡಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕೋರಿದರು. ಕಲ್ಪತರು ಕಲಾ ಟ್ರಸ್ಟ್ ಅಧ್ಯಕ್ಷ ಚಿಗಟೇರಿ ಕೊಟ್ರೇಶ, ಕೊಟ್ಟೂರೇಶ್ವ ರಥೋತ್ಸವದ ಸಂದರ್ಭದಲ್ಲಿ ಮೂರು ದಿನಗಳ ನಾಟಕೋತ್ಸವ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದರು.

    ಕಸಾಪ ಅಧ್ಯಕ್ಷ ಡಿ.ಕೊಟ್ರೇಶ, ಪಪಂ ಸದಸ್ಯೆ ವೀಣಾ ವಿವೇಕಾನಂದಗೌಡ, ವಿಜಯನಗರ ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷ ಕೆ. ರಾಮಣ್ಣ, ಕಾವ್ಯವಾಹಿನಿ ಗಾಯನ ಸಂಸ್ಥೆ ಅಧ್ಯಕ್ಷೆ ಜ್ಯೋತಿರಾಜ್, ಕಲಾವಿದ ಪರಶುರಾಮ್ ಇದ್ದರು.

    ಹಿಂದೂಸ್ಥಾನಿ ಸಂಗೀತ, ಭರತನಾಟ್ಯ, ಸುಗಮ ಸಂಗೀತ, ಜಗಲ್ ಬಂದಿ-ಟ್ರಮ್‌ಪೇಟ್, ಶಹನಾಯಿವಾದನ, ಗಮಕವಾಚನ, ಸಂಗೀತ ಕಾರ್ಯಕ್ರಮಗಳು ನಡೆದವು. ಕಲಾ ಸ್ವರ ಸಂಸ್ಥೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿವಪ್ರಕಾಶ ಸ್ವಾಗತಿಸಿದರು. ಸಿದ್ದರಾಮೇಶ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts