More

    ಬಾಡಿಗೆಯಲ್ಲಿ ಜಾಗವಿಲ್ಲ, ಇನ್ನೂ ಸ್ವಂತ ಕಟ್ಟಡವಿಲ್ಲ, ಸಾರ್ವಜನಿಕ ರಸ್ತೆ ಮಧ್ಯೆ ಪೊಲೀಸ್ ಸಬ್ ಮೀಟಿಂಗ್ !

    ಕೊಟ್ಟೂರು: ಇರುವ ಬಾಡಿಗೆ ಕಟ್ಟಡದಲ್ಲಿ ಸಭೆಗೆ ಬೇಕಿರುವಷ್ಟು ಸ್ಥಳವಿಲ್ಲ, ಠಾಣೆಗೆ ಸ್ವಂತ ಕಟ್ಟಡವೂ ಇಲ್ಲ. ಇದರಿಂದ ಪರಿಣಾಮವಾಗಿ ಸ್ಥಳೀಯ ಪೊಲೀಸರು ಸಬ್ ಮೀಟಿಂಗ್ ಸಾರ್ವಜನಿಕ ರಸ್ತೆ ಮಧ್ಯೆ ನಡೆಸಿದರು !

    ಪಟ್ಟಣದ ಟೌನ್ ಠಾಣೆ ಸಬ್ ಇನ್ಸಫೆಕ್ಟರ್ ನಾಗಪ್ಪ, ಪೊಲೀಸರಿಗೆ ಮಂಗಳವಾರ ರಾತ್ರಿ ಸಾರ್ವಜನಿಕರ ರಸ್ತೆಯಲ್ಲೇ ಸಬ್‌ಮೀಟಿಂಗ್ ತೆಗೆದುಕೊಂಡು ಪೊಲೀಸರು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರೊಂದಿಗೆ ಸ್ನೇಹದಿಂದ ವರ್ತಿಸಬೇಕು. ಅಪರಾಧ ನಡೆಯದಂತೆ ಎಚ್ಚರಿಕೆವಹಿಸಬೇಕು ಎಂದರು.

    ಪೊಲೀಸ್ ಠಾಣೆ ಬಾಡಿಗೆ ಕಟ್ಟಡದಲ್ಲಿದ್ದು, ಸಬ್ ಮೀಟಿಂಗ್ ಮಾಡಲು ಜಾಗವಿಲ್ಲದ ಕಾರಣ ಠಾಣೆ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಸಭೆ ನಡೆಸಿದ್ದರಿಂದ ಸಭೆ ನಡೆಸಿದಷ್ಟು ಸಮಯ ತಾತ್ಕಾಲಿಕ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ರಸ್ತೆ ಮಾರ್ಗವಾಗಿ ಸರ್ಕಾರಿ ಆಸ್ಪತ್ರೆ, ಮುಖ್ಯ ಬಸ್ ನಿಲ್ದಾಣಕ್ಕೆ ಹೋಗುವ ವಾಹನಗಳು ಬೇರೆ ಮಾರ್ಗವಾಗಿ ಹೋಗುವುದು ಅನಿವಾರ್ಯವಾಗಿತ್ತು.

    ಎ.ಎಸ್.ಐ ನಾಗರತ್ನಮ್ಮ, ಮುಖ್ಯಪೇದೆ ರಾಜೇಂದ್ರ ಕುಮಾರ್, ಬಸಣ್ಣ, ರಮೇಶ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.

    ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅ.26ರಂದು ಭೂಮಿ ಪೂಜೆ ನಡೆದಿದೆ. ಆರು ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಸಾರ್ವಜನಿಕರಿಗೆ ಈ ಸಮಸ್ಯೆ ಇರುವುದಿಲ್ಲ.
    | ನಾಗಪ್ಪ ಸಬ್ ಇನ್ಸಫೆಕ್ಟರ್ ಕೊಟ್ಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts