More

    ಕೊಟ್ಟೂರಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ವಿಜಯನಗರ ಜಿಲ್ಲಾಡಳಿತ ಒಪ್ಪಿಗೆ: 9 ಕೋಟಿ ರೂ. ವೆಚ್ಚದ ಕಾಮಗಾರಿ

    ಕೊಟ್ಟೂರು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದ 2.61 ಎಕರೆಯಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ವಿಜಯನಗರ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿ ಬುಧವಾರ ಆದೇಶ ಹೊರಡಿಸಿದೆ.

    ತಾಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಜಿಲ್ಲಾ ಗಣಿ ಅನುದಾನದಲ್ಲಿ (ಡಿಎಂಎಫ್) 5 ಕೋಟಿ ರೂ. ಕಾಯ್ದಿರಿಸಿದ್ದು, ಶಾಸಕರ ಅನುದಾನದಲ್ಲಿ 4 ಕೋಟಿ ರೂ. ನೀಡಲಾಗಿದೆ. ಒಟ್ಟು 9 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಲಿದೆ. ಸೌಧ ನಿರ್ಮಾಣಕ್ಕೆ ಪಟ್ಟಣದ ಹಲವು ಕಡೆ ಜಾಗ ಹುಡುಕಾಟ ನಡೆಸಲಾಗಿತ್ತು. ಆದರೆ, ಎಲ್ಲಿ ನಿರ್ಮಾಣ ಮಾಡಬೇಕೆಂದು ನಿರ್ಧರಿಸಿರಲಿಲ್ಲ. ಹಲವು ಸ್ಥಳ ಗುರುತಿಸಿ ಜಿಲ್ಲಾಡಳಿತದ ಒಪ್ಪಿಗೆಗೆ ಕಳುಹಿಸಲಾಗಿತ್ತು. ಬುಧವಾರ ಸರ್ಕಾರಿ ಆಸ್ಪತ್ರೆ ಪಕ್ಕದ 2.61 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಜಿಲ್ಲಾಡಳಿತ ಸಮ್ಮತಿಸಿದೆ.

    ಜಿಲ್ಲಾಧಿಕಾರಿ ಆದೇಶದ ತಲುಪುತ್ತಿದ್ದಂತೆ ತಹಸೀಲ್ದಾರ್ ಎಂ.ಕುಮಾರಸ್ವಾಮಿ, ಪಪಂ ಮುಖ್ಯಾಧಿಕಾರಿ ನಸರುಲ್ಲಾ ಮತ್ತು ತಾಲೂಕು ಸರ್ವೇ ಇಲಾಖೆ ಸಿಬ್ಬಂದಿ ಸರ್ಕಾರಿ ಆಸ್ಪತ್ರೆ ಪಕ್ಕದ 2.61 ಎಕರೆ ಪ್ರದೇಶಕ್ಕೆ ತೆರಳಿ ಪರಿಶೀಲಿಸಿತು. ಅಲ್ಲದೆ ಇಲ್ಲಿರುವ ಟೆನ್ನಿಸ್ ಕೋರ್ಟ್, ಪೆಟ್ಟಿಗೆ ಅಂಗಡಿ, ತರಕಾರಿ ಅಂಗಡಿ, ಹೋಟೆಲ್‌ಗಳವರಿಗೆ ನ.19ರೊಳಗೆ ತೆರವಾಗಬೇಕು. ಇಲ್ಲದಿದ್ದರೆ ಜೆಸಿಬಿ, ಟ್ರಾೃಕ್ಟರ್, ಇಟಾಚಿ ತರಿಸಿ ತೆರವುಗೊಳಿಸುವುದಾಗಿ ತಹಸೀಲ್ದಾರ್ ಕುಮಾರಸ್ವಾಮಿ ಎಚ್ಚರಿಸಿದರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts