More

    ಕೊಟ್ಟೂರೇಶ್ವರ ಮಹಾರಾಜ್ ಕೀ ಜೈ, ಅದ್ದೂರಿಯಿಂದ ಜರುಗಿದ ಸ್ವಾಮಿ ಜಾತ್ರೆ

    ಕೊಟ್ಟೂರು: ಅಸಂಖ್ಯಾತ ಭಕ್ತರ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸೋಮವಾರ ವೈಭವವಾಗಿ ಜರುಗಿತು.

    ಇದನ್ನೂ ಓದಿ: ಶ್ರೀ ಕೊಟ್ಟೂರೇಶ್ವರ ಜಾತ್ರೆಗೆ ಕ್ಷಣಗಣನೆ

    ಸಾಮಾನ್ಯವಾಗಿ ಐದರಿಂದ ಐದು ಹದಿನೈದು ನಿಮಿಷದಲ್ಲಿ ಜರುಗಬೇಕಿದ್ದ ರಥೋತ್ಸವ ಈ ಸಲ ಮಿಣಿಯ ಸಮಸ್ಯೆಯಿಂದಾಗಿ ನಲವತ್ತು ನಿಮಿಷ ತಡವಾಗಿ ರಥ ಸಾಗಿತು. ತಡವಾಗಿ ರಥ ಸಾಗಿದರೂ ಲಕ್ಷಾಂತರ ಜನರು ಒಕ್ಕೊರಲಿನಿಂದ ಕೊಟ್ಟೂರೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟಿತು. ಬಿಸಿಲಿನ ಝಳಕ್ಕೆ ಭಕ್ತರು ತತ್ತರಿಸಿದರು.

    ನಾಲ್ಕು ಜನರು ಜ್ಞಾನ ತಪ್ಪಿದ್ದರು. ಬೆಳಗ್ಗೆ ಶಾಸ್ತ್ರೋಕ್ತವಾಗಿ ಎಣಿಗೆ ಪೂಜೆ ಸಲ್ಲಿಸಿ ವಿಜೃಂಭಣೆಯಿಂದ ಅದನ್ನು ರಥಕ್ಕೆ ನಿಲ್ಲಿಸಿದ ನಂತರ ಮಧ್ಯಾಹ್ನ ಬಲಿದಾನವನ್ನು ರಥಕ್ಕೆ ಸಮರ್ಪಿಸಲಾಯಿತು.

    ತರುವಾಯ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಹೀರೇಮಠದಿಂದ ಕ್ರಿಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರ ನೇತೃತ್ವದಲ್ಲಿ ಪಲ್ಲಕ್ಕಿಯಲ್ಲಿ ದೇವರ ಮೂರ್ತಿಯನ್ನಿಟ್ಟು, ಹರಳಯ್ಯನ ಮಗಳಿಂದ ದೂಪದಾರತಿ, ಆರತಿ ಬೆಳಗಿಸಿಕೊಂಡು ವಿವಿಧ ಮೇಳಗಳೊಂದಿಗೆ ರಥವೇರಿತು.

    ಕೆ.ಅಯ್ಯನಹಳ್ಳಿಯಿಂದ ಆರು ಕಿಮೀ ದೂರ ಕೊಟ್ಟೂರಿಗೆ ಪಾದಯಾತ್ರೆ ಬಂದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ತಹಸೀಲ್ದಾರ ಜಿ.ಕೆ. ಅಮರೇಶ, ಧಾರ್ಮಿಕ ದತ್ತಿ ಇಲಾಖೆ ಇಒ ಕೃಷ್ಣಪ್ಪ ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದರು.

    ಶಾಸಕ ನೇಮಿರಾಜ್ ನಾಯ್ಕ, ಮಾಜಿ ಶಾಸಕ ಭೀಮಾನಾಯ್ಕ ಹಗರಿಬೊಮ್ಮನಹಳ್ಳಿಯಿಂದ ಕೊಟ್ಟೂರಿಗೆ ಪಾದಯಾತ್ರೆ ಬಂದು ಸ್ವಾಮಿ ದರ್ಶನ ಪಡೆದರು. ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ. ಲೋಕಸಭಾ ಸದಸ್ಯ ದೇವೇಂದ್ರಪ್ಪ ಸೇರಿದಂತೆ ಪ್ರಮುಖರು ಸ್ವಾಮಿ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts