More

    ಜ.28ರಿಂದ ಕೊಟ್ಟೂರಲ್ಲಿ ತರಳಬಾಳು ಹುಣ್ಣಿಮೆ

    ಕೊಟ್ಟೂರು: ಪಟ್ಟಣದಲ್ಲಿ ಪ್ರಥಮ ಬಾರಿಗೆ ಜ.28 ರಿಂದ 9 ದಿನಗಳ ಕಾಲ ನಡೆಯುವ ತರಳಬಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ ಕಾಯ್ದಿರಿಸಿರುವ 105 ಎಕರೆ ಭೂಮಿಯನ್ನು ಸೋಮವಾರ 6 ಜೆಸಿಬಿ ಮೂಲಕ ಸ್ವಚ್ಛಗೊಳಿಸಲಾಯಿತು.

    ಕೊಟ್ಟೂರು-ಉಜ್ಜಿನಿ ಮಾರ್ಗದ ಶ್ರೀ ಮರುಳಸಿದ್ದೇಶ್ವರ ಕಲ್ಯಾಣ ಮಂಟಪ ಪಕ್ಕದ 105 ಎಕರೆ ಜಮೀನನ್ನು 40 ರೈತರು ಸ್ವಾ ಇಚ್ಚೆಯಿಂದ ತರಳಬಾಳು ಹುಣ್ಣಿಮೆ ಉತ್ಸವಕ್ಕಾಗಿ ಬಿಟ್ಟು ಕೊಟ್ಟಿದ್ದಾರೆ. ಹೊಲಗಳಲ್ಲಿದ್ದ ಮುಳ್ಳುಗಿಡಗಳನ್ನು ಜೆಸಿಬಿಗಳು ತೆರವುಗೊಳಿಸಿದವು. ಕೆಲ ರೈತರು ಜಮೀನಿನಲ್ಲಿದ್ದ ಫಸಲು ತೆಗೆದುಕೊಂಡು ಭೂಮಿಯನ್ನು ಸಮತಟ್ಟು ಮಾಡಿದರು. ಬೆಳಗ್ಗೆಯಿಂದಲೇ ಯಾವುದೇ ಬಾಡಿಗೆ ಪಡೆಯದೆ 6 ಜೆಸಿಬಿಗಳ ಮಾಲೀಕರು 105 ಎಕರೆಯಲ್ಲಿನ ಗಿಡಗಳ ತೆರವು ಮತ್ತು ಭೂಮಿ ಸಮತಟ್ಟು ಕಾರ್ಯವನ್ನು ಬಿರುಸಿನಿಂದ ನಡೆಸಿದರು. ತರಳಬಾಳು ಹುಣ್ಣಿಮೆ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಬಿ.ಸಿ. ಮೂಗಪ್ಪ, ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts