More

    ಧರ್ಮಜಾಗೃತಿ ಸಭೆಗಳಿಂದ ಸಮಾಜದಲ್ಲಿ ಶಾಂತಿ

    ಕೊಟ್ಟೂರು: ತಮ್ಮ ಸ್ವಾರ್ಥ ಸಾಧನೆಗಾಗಿ ಪಟ್ಟಭದ್ರ ಹಿತಾಸಕ್ತಿಗಳು ಸಮಾಜ ಒಡೆಯಲು ಮತ್ತು ಸೌಹಾರ್ದಕ್ಕೆ ಧಕ್ಕೆ ತರಲು ಯತ್ನಿಸುತ್ತಿವೆ. ಇದಕ್ಕೆ ಕಿವಿಗೊಡದೆ ಎಲ್ಲರೂ ಧರ್ಮಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಪಟ್ಟಣದಲ್ಲಿ ಸೋಮವಾರ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೇವರು-ದೇವರುಗಳ, ಜಾತಿ-ಜಾತಿಗಳ ಮತ್ತು ಧರ್ಮ-ಧರ್ಮಗಳ ನಡುವೆ ದ್ವೇಷ ಸೃಷ್ಟಿಸುತ್ತಿರುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗುತ್ತಿವೆ. ಎಲ್ಲ ಧರ್ಮಗಳ ಸಂದೇಶವೂ ಒಂದೇ. ಇಂದಿನ ಕಲುಷಿತ ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಧರ್ಮಜಾಗೃತಿ ಸಭೆಗಳು ನಡೆಯಬೇಕು. ಇಲ್ಲಿ ಜಗದ್ಗುರುಗಳು ನೀಡುವ ವಚನಾಮೃತ ಆಲಿಸಿದಾಗ ಸಮಾಜದಲ್ಲಿ ಶಾಂತಿ ಸ್ಥಿರವಾಗಿ ನಿಲ್ಲುತ್ತದೆ ಎಂದರು.

    ಕೊಟ್ಟೂರಿನ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯರು, ಹಂಪಸಾಗರದ ಶ್ರೀ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಮರಿಯಮ್ಮನಹಳ್ಳಿ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಲಿಂಗದಹಳ್ಳಿ ಶ್ರೀ ವೀರಭದ್ರ ಶಿವಾಚಾರ್ಯರು, ಮಾಜಿ ಶಾಸಕ ನೇಮಿರಾಜ ನಾಯ್ಕ, ವಕೀಲ ಎಂಎಂಜೆ ಸ್ವರೂಪಾನಂದ, ಸಮಾಜ ಸೇವಕಿ ರೂಪ ಉದಯಸಿಂಗ್ ಲಾಡ್ ಮಾತನಾಡಿದರು.

    ಕೊಟ್ಟೂರಿನಲ್ಲಿ ಎರಡು ವರ್ಷದ ನಂತರ ದಸರಾ ದರ್ಬಾರ್
    ಕೊಟ್ಟೂರಿನ ಜವಳಿ ವರ್ತಕ ನೀಲಕಂಠಪ್ಪ ನಿವಾಸದಿಂದ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳನ್ನು ಪೂರ್ಣಕುಂಭ ಕಳಸ, ಸಮಳ. ನಂದಿಧ್ವಜ ಸೇರಿದಂತೆ ವಿವಿಧ ವಾದ್ಯಗಳಿಂದ ಅದ್ದೂರಿಯಾಗಿ ಮೆರವಣಿಗೆ ಮೂಲಕ ರಂಭಾಪುರಿ ಮಂಗಲ ಭವನಕ್ಕೆ ಕರೆತರಲಾಯಿತು. ನಂತರ 500ಕ್ಕೂ ಹೆಚ್ಚು ಭಕ್ತರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು. ಈ ಸಂದರ್ಭ ಆಶೀರ್ವಚನ ನೀಡಿದ ಜಗದ್ಗುರುಗಳು, ಈಸಲ ಹಾಸನ ಜಿಲ್ಲೆ ಬೇಲೂರು, ಮುಂದಿನ ವರ್ಷ ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ದಸರಾ ದಬಾರ್ ನಡೆಸಲು ಅಲ್ಲಿಯ ಭಕ್ತರು ದಿನಾಂಕ ಗೊತ್ತುಮಾಡಿದ್ದಾರೆ. ಎರಡು ವರ್ಷದ ನಂತರ ನಿಮ್ಮ ಅಭಿಮಾನದ ಮೇರೆಗೆ ಕೊಟ್ಟೂರಿನಲ್ಲಿ ನಡೆಸಲು ಸಮ್ಮತಿಸಿದ್ದೇವೆ ಎಂದರು. ಶ್ರೀ ಹಾಲಸ್ವಾಮಿ, ಶ್ರೀ ಯೋಗಿರಾಜೇಂದ್ರ ಸ್ವಾಮೀಜಿ, ಜೆಡಿಎಸ್ ಮುಖಂಡ ಡಾ.ವೆಂಕಟೇಶ, ತಿಪ್ಪೇಸ್ವಾಮಿ ಮಾತನಾಡಿದರು. ಪ್ರಮುಖರಾದ ಭಾವಿಕಟ್ಟೆ ಶಿವಾನಂದ. ಬಾಚೇನಹಳ್ಳಿ ಗುರುಬಸವರಾಜ್. ಗುರುಶಾಂತಪ್ಪ. ಮಾಮನಿ ವೀರಭದ್ರಪ್ಪ. ನೀಲಕಂಠಪ್ಪ. ಪ್ಯಾಟಿ ಗೌಡ. ವಿಶ್ವನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts