More

    ಕೊಟ್ಟೂರಲ್ಲಿ ಆಕ್ಸಿಜನ್ ಬೆಡ್‌ಗಳು ಸಿದ್ಧ: ತಾಲೂಕು ವೈದ್ಯಾಧಿಕಾರಿ ಷಣ್ಮುಖ ನಾಯ್ಕ ಮಾಹಿತಿ

    ಕೊಟ್ಟೂರು: ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲೆಂದು ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 10 ಆಕ್ಸಿಜನ್ ವ್ಯವಸ್ಥೆ ಇರುವ ಬೆಡ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಷಣ್ಮುಖನಾಯ್ಕ ತಿಳಿಸಿದರು.

    ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನಲ್ಲಿ ಬಹುತೇಕ ಕರೊನಾ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದಾರೆ. ವೃದ್ಧರು ಹಾಗೂ ಉಸಿರಾಟದ ತೊಂದರೆ ಇರುವವರು ಜಿಲ್ಲಾಸ್ಪತ್ರೆಗೆ ತೆರಳುತ್ತಿದ್ದು, ಕೊಟ್ಟೂರಿನಲ್ಲಿ ಸಿದ್ಧಪಡಿಸಿರುವ ಬೆಡ್‌ಗಳಲ್ಲಿ ಈವರೆಗೆ ಯಾವ ರೋಗಿಯೂ ದಾಖಲಾಗಿಲ್ಲ. ಕೊಟ್ಟೂರು ಆರೋಗ್ಯ ಕೇಂದ್ರದಲ್ಲಿ ಸ್ಯಾಚುರೇಷನ್ ಕಡಿಮೆ ಕಾಣಿಸಿಕೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹವರಿಗೆ ಪಾಸಿಟಿವ್ ಕಂಡುಬಂದರೆ ಕೂಡಲೇ ಅವರನ್ನು ಪ್ರತ್ಯೇಕ ಬೆಡ್‌ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಲಸಿಕೆ ಪಡೆಯಲು ನಿತ್ಯ ನೂರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದು, ಟೋಕನ್ ವ್ಯವಸ್ಥೆ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವ್ಯಾಕ್ಸಿನ್ ನೀಡಿದರೆ, ಪಟ್ಟಣದ ನಾಗರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ತಾತ್ಕಾಲಿಕ ಆರೋಗ್ಯ ಉಪಕೇಂದ್ರದಲ್ಲಿ ಕೋವಿಸಿಲ್ಡ್ ಲಸಿಕೆ ನೀಡಲಾಗುತ್ತಿದೆ. ಎರಡೂ ಲಸಿಕೆಗಳು ಸ್ಟಾಕ್ ಇರುವವರೆಗೂ ಜನರಿಗೆ ನೀಡುತ್ತೇವೆ. ಮುಗಿದ ನಂತರ ಜಿಲ್ಲಾ ಕೇಂದ್ರದಿಂದ ತರಿಸಿ ಲಸಿಕೆ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಡಾ.ಷಣ್ಮುಖನಾಯ್ಕ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts