More

    ಕೊಟ್ಟೂರು ಗ್ರಂಥಾಲಯ ಅಭಿವೃದ್ಧಿಗೆ ಅನುದಾನ

    ಕೊಟ್ಟೂರು: ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ರಿಪೇರಿ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಡಿಎಂಎಫ್ ಅನುದಾನದಿಂದ 25 ಲಕ್ಷ ರೂ. ಶಾಸಕ ಭೀಮನಾಯ್ಕ ನೀಡಿದ್ದಾರೆ ಎಂದು ಜಿಲ್ಲಾ ಗ್ರಂಥಾಲಯ ಉಪ ನಿರ್ದೇಶಕಿ ಡಿ.ಕೆ. ಲಕ್ಷ್ಮೀ ಕಿರಣ್ ತಿಳಿಸಿದರು.

    ಈ ಕುರಿತು ಸುದ್ದಿಗಾರರಿಗೆ ಮಾತನಾಡಿ, ಗ್ರಂಥಾಲಯದ ಕಟ್ಟಡಗಳ ನೀಲನಕ್ಷೆ ಸಿದ್ಧಪಡಿಸಿ ಕಾಮಗಾರಿ ಆರಂಭಿಸಲಾಗುವುದು. ವಿಜಯನಗರ ಜಿಲ್ಲೆಯಲ್ಲಿ ಕೆಲ ಗ್ರಾಪಂ ಗ್ರಂಥಾಲಯಗಳು, ಶಾಖಾ ಗ್ರಂಥಾಲಯಗಳು ಈಗಾಗಲೇ ಹೈಟೆಕ್ ಗ್ರಂಥಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಇಡೀ ಜಿಲ್ಲೆಯ ಎಲ್ಲಾ ಶಾಖಾ ಹಾಗೂ ಗ್ರಾಪಂ ಗ್ರಂಥಾಲಯಗಳನ್ನು ಹೈಟೆಕ್ ಗ್ರಂಥಾಲಯಗಳನ್ನಾಗಿ ಹಂತ ಹಂತವಾಗಿ ಮಾರ್ಪಡಿಸಲಾಗುವುದು.

    ವಿಜಯನಗರ ಜಿಲ್ಲೆಯಲ್ಲಿ 28 ಗ್ರಂಥಪಾಲಕರು, ಸಹಾಯಕ ಗ್ರಂಥಪಾಲಕರ ಹುದ್ದೆಗಳು ಖಾಲಿ ಇದ್ದು, ಇಲಾಖೆಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಸರ್ಕಾರ ಶೀಘ್ರ ಇವುಗಳನ್ನು ಭರ್ತಿಮಾಡಲಿದೆ ಎಂದರು.
    ಗ್ರಂಥಾಲಯದಲ್ಲಿ ಆರ್ಮಿಗೆ ಸಂಬಂಧಿಸಿದ ಪುಸ್ತಕಗಳಿಲ್ಲ ಎಂದು ಓದುಗ ಕೃಷ್ಣಪ್ಪ ನಿರ್ದೇಶಕರ ಗಮನಕ್ಕೆ ತಂದರು. ಶೀಘ್ರವೇ ಈ ಕುರಿತ ಪುಸ್ತಕಗಳನ್ನು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು. ಗ್ರಂಥಾಲಯದಲ್ಲಿ ಶೌಚಗೃಹ ಇಲ್ಲದಿರುವುದನ್ನು ಓದುಗರು ಉಪ ನಿರ್ದೇಶಕರ ಗಮನಕ್ಕೆ ತಂದಾಗ, ಶೌಚಗೃಹ ನಿರ್ಮಿಸುವ ಭರವಸೆ ನೀಡಿದರು.

    ವಿಜಯವಾಣಿ ಪತ್ರಿಕೆಯಲ್ಲಿ ಶುಕ್ರವಾರ ‘ಭಯದಲ್ಲಿ ಪುಸ್ತಕ ಓದುವ ಅನಿವಾರ್ಯತೆ’ ಶೀರ್ಷಿಕೆ ಅಡಿ ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆ ಶನಿವಾರ ಗ್ರಂಥಾಲಯಕ್ಕೆ ಜಿಲ್ಲಾ ಗ್ರಂಥಾಲಯ ಉಪ ನಿರ್ದೇಶಕಿ ಡಿ.ಕೆ. ಲಕ್ಷ್ಮೀ ಕಿರಣ್ ತಂಡ ಭೇಟಿ ನೀಡಿ ಪರಿಶೀಲಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts