More

    ದಲಿತ ಸಮುದಾಯಕ್ಕೆ ಸೌಲಭ್ಯ ಕಲ್ಪಿಸಲು ವಿಶೇಷ ಸಭೆ ಆಯೋಜಿಸಿ: ದಲಿತ ಹಕ್ಕುಗಳ ಸಮಿತಿ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ ಒತ್ತಾಯ

    ಮಂಡ್ಯ: ದಲಿತ ಸಮುದಾಯಕ್ಕೆ ಸರ್ಕಾರಿ ಸೌಲಭ್ಯ ಕಲ್ಪಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಎರಡು ದಿನದ ವಿಶೇಷ ಸಭೆ ಕರೆದು ಚರ್ಚಿಸಬೇಕು ಎಂದು ದಲಿತ ಹಕ್ಕುಗಳ ಸಮಿತಿ-ಕರ್ನಾಟಕ ಸಂಘಟನೆಯ ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ ಒತ್ತಾಯಿಸಿದರು.
    ಸಮುದಾಯದವರಷ್ಟೇ ಸಂಘಟಿತರಾಗಿ ದಲಿತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೇವೆಂಬುದು ಕಷ್ಟಸಾಧ್ಯ. ದಲಿತೇತರ ಜನಾಂಗದವರನ್ನು ಒಳಗೊಂಡಂತೆ ನಾವು ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ. ಜಾತಿ ತಾರತಮ್ಯ, ಅಸ್ಪಶ್ಯತೆ, ದೌರ್ಜನ್ಯ-ದಬ್ಬಾಳಿಕೆಗಳಿಗೆ ನಿಯಂತ್ರಣ ಹೇರಬೇಕಿದೆ. ದುಸ್ಥಿತಿಯಲ್ಲಿರುವ ದಲಿತ ಸಮುದಾಯದವರನ್ನು ಪಾರು ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಮುಂದಾಗಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
    ದಲಿತ ಸಮುದಾಯದವರಿಗೆ ದೇವಾಲಯಗಳ ಪ್ರವೇಶ ನಿರಾಕರಣೆ, ಕ್ಷೌರ ನಿರಾಕರಣೆ ಸೇರಿದಂತೆ ಇಂತಹ ಪ್ರಕರಣಗಳು ಈಗಿನ ಜನಾಂಗದಿಂದ ಆಚರಿಸಲ್ಪಡುತ್ತಿಲ್ಲ. ಇದು ತಲೆತಲಾಂತರದಿಂದ ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಅಸ್ಪಶ್ಯತೆ ಆಚರಣೆ, ಜಾತಿ ತಾರತಮ್ಯವನ್ನು ಗುರುತಿಸಿ ತಡೆಗಟ್ಟಬೇಕಿದೆ. ಇದಕ್ಕಾಗಿ ನಾವು ಜನರಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಬೇಕಿದೆ. ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದು ಹೇಳಿದರು.
    ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳು-ಶಕ್ತಿಗಳ ವಿರುದ್ಧ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು. ನಿವೇಶನ-ವಸತಿ ರಹಿತರನ್ನು ಜಿಲ್ಲಾದ್ಯಂತೆ ಸರ್ವೇ ಮೂಲಕ ಗುರುತಿಸಿ, ಅರ್ಹರಿಗೆ ನಿವೇಶನ-ವಸತಿ ಸೌಲಭ್ಯ ಕಲ್ಪಿಸಬೇಕು. ಎಲ್ಲ ಜಾತಿ, ಜನಾಂಗದ ಬಡವರಿಗೂ ನಿವೇಶನ-ವಸತಿ ಸವಲಭ್ಯ ಸಿಗಬೇಕು. ಸರಕಾರದ ನಾನಾ ಇಲಾಖೆಗಳ ಅನುದಾನ ಅರ್ಹ ದಲಿತರನ್ನು ತಲುಪುವಂತಾಗಲು ಆಡಳಿತ ವರ್ಗ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಆರ್.ಕೃಷ್ಣ, ರಾಜ್ಯ ಸಮಿತಿ ಸದಸ್ಯೆ ಗಿರಿಜಮ್ಮ, ಜಿಲ್ಲಾ ಕಾರ್ಯದರ್ಶಿ ಅಂಬೂಜಿ, ರಾಜೇಶ್, ಮಲ್ಲಿಕಾರ್ಜುನಸ್ವಾಮಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts