More

    ಹಂಪಿ ಉತ್ಸವದ ದಿನಾಂಕ ನಿರ್ಧಾರವಾಗಿಲ್ಲ- ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ ಹೇಳಿಕೆ

    ಕೊಟ್ಟೂರು: ಹಂಪಿ ಉತ್ಸವದ ದಿನಾಂಕ ಮತ್ತು ಎಷ್ಟು ದಿನ ನಡೆಸಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ವಿಜಿಯನಗರ ಜಿಲ್ಲಾಧಿಕಾರಿ ಟಿ. ವೆಂಕಟೇಶ ಹೇಳಿದರು.

    ನಗರಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು. ಪಟ್ಟಣದಲ್ಲಿ 24×7 ಕುಡಿಯುವ ನೀರಿನ ಯೋಜನೆ ಕಳೆದ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಗುತ್ತಿಗೆದಾರರಿಗೆ 50ಲಕ್ಷ ರೂ. ದಂಡವಿಧಿಸಿದ್ದರೂ ಯೋಜನೆ ಪೂರ್ಣಗೊಂಡಿಲ್ಲವೆಂದು ಪತ್ರಕರ್ತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಗುತ್ತಿಗೆದಾರರಿಗೆ ಕಾಮಗಾರಿ ಮಾಡಲು ಆಗದಿದ್ದರೆ, ಆತನ ಹೆಸರನ್ನು ಬ್ಲಾಕ್ ಲೀಸ್ಟ್‌ಗೆ ಸೇರಿಸಿ, ಬೇರೆ ಗುತ್ತಿಗೆದಾರರಿಂದ ಯೋಜನೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

    ಪಟ್ಟಣದಲ್ಲಿ ರಸ್ತೆಗಳು ಹದಗೆಟ್ಟ ಬಗ್ಗೆ ಬೇಜಾರು ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಗುತ್ತಿಗೆದಾರರ ವಿಚಾರಣೆ ನಡೆಸಿ ರಸ್ತೆ ಕಾಮಗಾರಿಯನ್ನು ಮುಗಿಸುವಂತೆ ಆದೇಶಿಸಲಾಗುವುದು. ತಾಲೂಕು ರಚನೆಯಾಗಿ ನಾಲ್ಕು ವರ್ಷ ಕಳೆದರೂ ಇನ್ನೂ ಹಲವಾರು ಕಚೇರಿಗಳು ಆರಂಭವಾಗಬೇಕಿದೆ ಎಂದರು.

    ಸಭೆ ನಡೆಸಿ ವರದಿ ಕೊಡಿ: ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆಸ್ಪತ್ರೆಯ ಅವ್ಯವಸ್ಥೆ ಕುರಿತು ತಾಲೂಕು ವೈದ್ಯಾಧಿಕಾರಿ ಡಾ.ಪ್ರದೀಪ್ ಹಾಗೂ ಆಸ್ಪತ್ರೆ ವೈದ್ಯ ಬಂದ್ಯಾನಾಯ್ಕ ಅವರನ್ನು ತರಾಟೆಗೆ ತಗೆದುಕೊಂಡರು. ಮೂರು ದಿನಗಳಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಸದಸ್ಯರ ವಿದ್ಯಾಭ್ಯಾಸ, ಸಮಿತಿಗೆ ಸದಸ್ಯರಾಗಲು ಆರ್ಹತೆ, ಇಲ್ಲಿಯ ತನಕ ನಡೆದ ಸಭೆಯ ಪ್ರಗತಿಯ ವರದಿ ನೀಡುವಂತೆ ಆದೇಶಿಸಿದರು. ಆರೋಗ್ಯ ರಕ್ಷಾ ಸಮಿತಿಗೆ ಬಂದ ಅನುದಾನದಲ್ಲಿ ಆಸ್ಪತ್ರೆಗೆ ಬೇಕಾದ ಔಷಧ ಎಷ್ಟು ಖರೀದಿಸಿದ್ದೀರಿ. ಅನುದಾನ ಎಷ್ಟು ಬಳಕೆಯಾಗಿದೆ ಎಂಬುದರ ವಿವರ ನೀಡಬೇಕು. ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿದ್ದ ಸಿಸಿ ರಸ್ತೆ ಕಾಮಗಾರಿಯನ್ನು ನಿಲ್ಲಿಸುವಂತೆ ಆದೇಶಿಸಿದರು. ದುಂದುವೆಚ್ಚ ಬೇಡ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts