More

    ಥಿಯೇಟರ್ ಇಲ್ಲದ ಊರಲ್ಲಿ ನಾಟಕಗಳದ್ದೇ ಹವಾ

    ಕೊಟ್ಟೂರು: ಸಿನಿಮಾ ಥಿಯೇಟರ್ ಇಲ್ಲದ ತಾಲೂಕು ಕೇಂದ್ರ ಕೊಟ್ಟೂರಿನಲ್ಲಿ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಜಾತ್ರೆ ನಿಮಿತ್ತ ನಾಲ್ಕು ನಾಟಕ ಕಂಪನಿಗಳು ಬಿಡಾರ ಹೂಡಿರುವುದು ಕಲಾ ಪ್ರೇಕ್ಷಕರಲ್ಲಿ ಖುಷಿ ಹೆಚ್ಚಿಸಿದೆ.

    ಕೊಟ್ಟೂರಿನಲ್ಲಿ ಕಲಾ ರಸಿಕರು, ಕಲಾ ಪೋಷಕರಿಗೆ ಮೊದಲಿಂದಲೂ ಪ್ರೋತ್ಸಾಹ ಇದೆ. ಡಾ.ರಾಜಕುಮಾರ್ ಸಿನಿಮಾ ನಟರಾಗುವ ಮೊದಲು, ಗುಬ್ಬಿ ವೀರಣ್ಣ ಕಂಪನಿ ಇಲ್ಲಿಗೆ ಬಂದಾಗ ಅವರು ಅದರಲ್ಲಿ ಅಭಿನಯಿಸಿದ್ದರು. ನಾಡಿನ ಖ್ಯಾತ ನಾಟಕ ಕಂಪನಿಗಳಿಗೆ ಕೊಟ್ಟೂರು ತವರು ಮನೆ ಇದ್ದಂತೆ. ಈಗ ಜೀವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರಿ ನಾಟ್ಯ ಸಂಘ, ಶ್ರೀಗುರು ಮಲ್ಲಿಕಾರ್ಜುನ ನಾಟ್ಯಸಂಘ, ಚಿತ್ತರಿಗಿಯ ಶ್ರೀಗುರು ವಿಜಯ ನಾಟಕ ಸಂಘ, ದಾವಣಗೆರೆ ಶ್ರೀ ಕೆ.ಬಿ.ಆರ್. ಡ್ರಾಮಾ ಕಂಪನಿ ಗುರುವಾರದಿಂದ ನಾಟಕಗಳನ್ನು ಪ್ರದರ್ಶಿಸುತ್ತಿವೆ.

    ಕಳೆದ ಎರಡು ವರ್ಷಗಳ ಹಿಂದೆ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಆದ ಮರು ದಿನವೇ ಕರೊನಾ ಅಪ್ಪಳಿಸಿದ್ದರಿಂದ ನಾಟಕ ಪ್ರದರ್ಶನಗೊಳ್ಳದೆ ಕಂಪನಿಗಳು ಭಾರೀ ನಷ್ಟ ಅನುಭವಿಸಿದ್ದವು. ಆಗಿನ ನಷ್ಟ ತುಂಬಿಕೊಳ್ಳಲು ನಾಟಕ ಕಂಪನಿಗಳು ಸಜ್ಜಾಗಿದ್ದು, ಕಲಾಪ್ರೇಮಿಗಳು ಮುಗಿಬಿದ್ದು ನಾಟಕ ವೀಕ್ಷಿಸಿಲು ಆಗಮಿಸುತ್ತಿದ್ದಾರೆ.

    ಕೊಟ್ಟೂರು ಸುತ್ತಮುತ್ತ 50 ರಿಂದ 60 ಹಳ್ಳಿಗಳಿದ್ದು, ಎಲ್ಲ ಊರಲ್ಲೂ ನಾಟಕ ಪ್ರೇಮಿಗಳಿದ್ದಾರೆ. ಇವರ ನಿರೀಕ್ಷೆಯಂತೆ ಖಾಸಗಿ ವಾಹಿನಿಗಳ ಮಜಾ ಟಾಕೀಸ್ ಖ್ಯಾತಿಯ ನೀಲಾ ಜೀವರ್ಗಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ, ಮಜಾ ಭಾರತದ ಮಲ್ಲಿಕಾ, ಜೂನಿಯರ್ ವಿಷ್ಟುವರ್ಧನ, ಚಲನಚಿತ್ರ ನಟ ಚಿಂದೋಡಿ ವಿಜಯಕುಮಾರ್, ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ರಾಜೇಶ್ವರಿ, ಅಮೃತ ವರ್ಷಿಣಿ ಧಾರಾವಾಹಿಯ ರಜನಿ ಇವರೆಲ್ಲರೂ ವಿವಿಧ ನಾಟಕ ಕಂಪನಿಗಳಲ್ಲಿ ನಟಿಸುತ್ತಿರುವುದರಿಂದ ಕಲಾ ಪ್ರೇಮಿಗಳಿಗೆ ರಸದೌತಣವೇ ಸಿಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts