More

    ಕೊಟ್ಟಮುಡಿ ಜಡ್‌ವೈಸಿ ತಂಡ ಚಾಂಪಿಯನ್

    ಗೋಣಿಕೊಪ್ಪ: ಕೊಟ್ಟಮುಡಿ ಜಡ್‌ವೈಸಿ ತಂಡವು 15ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಗುಂಡಿಕೆರೆ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

    ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ (ಕೆಡಿಎಂಎಸ್‌ಸಿಎ)ವತಿಯಿಂದ ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ಜ.19 ರಿಂದ 21ರ ವರೆಗೆ ಮೂರು ದಿನ ಜಮಾಅತ್ ವಾರು ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.

    ಪಂದ್ಯಾವಳಿಯ ಬೆಸ್ಟ್ ಆಲ್ರೌಂಡರ್ ವಿಶೇಷ ಪ್ರಶಸ್ತಿಯನ್ನು ಕೊಟ್ಟಮುಡಿ ಜಡ್‌ವೈಸಿ ತಂಡದ ಸುಹೇಲ್ ಪಡೆದುಕೊಂಡರೆ, ಬೆಸ್ಟ್ ಡಿಫೆನ್ಸ್ ಪ್ರಶಸ್ತಿಯನ್ನು ಅದೇ ತಂಡದ ಇರ್ಷಾದ್ ಪಡೆದುಕೊಂಡರು. ಬೆಸ್ಟ್ ಬ್ಲಾಕರ್ ಪ್ರಶಸ್ತಿಯನ್ನು ಕೊಟ್ಟಮುಡಿ ಜಡ್‌ವೈಸಿ ತಂಡದ ಬಾಸಿತ್ ಪಡೆದುಕೊಂಡರು. ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಗುಂಡಿಕೆರೆ ತಂಡದ ಬದ್ರುದ್ದೀನ್ ಪಡೆದುಕೊಂಡರು. ಪಂದ್ಯಾವಳಿಯ ಬೆಸ್ಟ್ ಪಾಸರ್ ಪ್ರಶಸ್ತಿಯನ್ನು ಗುಂಡಿಕೆರೆ ತಂಡದ ಗಪೂರ್ ಪಡೆದರು.
    ಭಾನುವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಭಾಗವಹಿಸಿ ಮಾತನಾಡಿ, ಸಹೋದರತೆ ಮತ್ತು ಸಾಮರಸ್ಯಮೂಡಲು ಕ್ರೀಡೆ ಸಹಕಾರಿ. ಕ್ರೀಡೆಯನ್ನು ಲಘುವಾಗಿ ಪರಿಗಣಿಸಬಾರದು ಎಂದರು.

    ಅಂಗವಿಕಲರ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದ ಅರೆಕಾಡುವಿನ ಹಸನ್ ಮತ್ತು ಪೌರಕಾರ್ಮಿಕ ಮಹಿಳೆ ಗೌರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಎ. ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವಿರಾಜಪೇಟೆ ಪುರಸಭಾ ಸದಸ್ಯ ದೇಚಮ್ಮ ಕಾಳಪ್ಪ, ಎಚ್.ಎಸ್. ಮತೀನ್ ಮೊಹಮ್ಮದ್ ರಾಫಿ, ಅಬ್ದುಲ್ ಜಲೀಲ್, ಎಚ್.ಎ.ಹಂಸ, ಎಂ.ಎ. ಇಸ್ಮಾಯಿಲ್, ಮೀದೇರಿರ ನವೀನ್, ಕೆ.ಎಂ. ಸಯ್ಯದ್ ಭಾವ, ಆಲೀರ ರಶೀದ್, ಅಬ್ದುಲ್ ರೆಹಮಾನ್, ಕರೀಂ ಕಡಂಗ, ಎಡಪಾಲ ಹಂಸು, ಕೋಳುಮಂಡ ರಫೀಕ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts