More

    ಹಾಕಿ ಉಚಿತ ಶಿಬಿರ ಸಂಪನ್ನ

    ಗೋಣಿಕೊಪ್ಪ: ಹುದಿಕೇರಿಯ ಅಂಜಿಗೇರಿ ನಾಡ್ ಕೂಟ ವತಿಯಿಂದ ಹುದಿಕೇರಿ ಶಾಲಾ ಮೈದಾನದಲ್ಲಿ 15 ದಿನಗಳ ಕಾಲ ಹಮ್ಮಿಕೊಂಡಿದ್ದ ಹಾಕಿ ಉಚಿತ ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡರು.

    ಸೋಮವಾರ ನಡೆದ ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಅಂಜಿಗೇರಿ ನಾಡ್‌ಕೂಟ ಯುವಕರು ಉಚಿತವಾಗಿ ಹಾಕಿ ಶಿಬಿರವನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಸ್ಥಳೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇವರ ಮುಂದಿನ ಭವಿಷ್ಯಕ್ಕೆ ಹಾಕಿ ಕ್ರೀಡೆಯು ಸಹಕಾರಿಯಾಗುವಂತಾಗಲಿ ಎಂದರು.

    ಬಲ್ಯಮಾಡ ತ್ರಸನ್ ಅವರ ತಂದೆ ಬಲ್ಯಮಾಡ ಬಬ್ಬು ಸ್ಮರಣಾರ್ಥ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅಂಜಿಗೇರಿ ನಾಡ್‌ಕೂಟದ ಅಧ್ಯಕ್ಷ ಚಂಗುಲಂಡ ಅಯ್ಯಪ್ಪ, ಕಾರ್ಯದರ್ಶಿ ಬಯವಂಡ ಪ್ರತು ಪೂವಣ್ಣ, ತರಬೇತುದಾರ ಚೆಕ್ಕೆರ ಆದರ್ಶ್ ಹಾಗೂ ಚಂದ್ರ ಪ್ರಕಾಶ್ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಅಂಜಿಗೇರಿ ನಾಡ್‌ಕೂಟದ ಪದಾಧಿಕಾರಿಗಳು ಸೇರಿದಂತೆ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts