More

    ಕೊರಗಜ್ಜ ಗುಡಿ ನಿರ್ಮಾಣಕ್ಕೆ ಶಿಲಾ ಮುಹೂರ್ತ

    ಬ್ರಹ್ಮಾವರ: ಕೊರಗರ ರಾಜ ಹುಬಾಶಿಕ ವಂಶಸ್ಥರು ಬಾರಕೂರಿನಲ್ಲಿ ಆರಾಧನೆ ಮಾಡಿಕೊಂಡು ಬರುತ್ತಿದ್ದ ಕೊರಗಜ್ಜ ದೈವಸ್ಥಾನ ಮರು ನಿರ್ಮಾಣಕ್ಕೆ ಭಾನುವಾರ ಉಡುಪಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ ಶಿಲಾ ಮುಹೂರ್ತ ನೆರವೇರಿಸಿದರು.

    ಕೊರಗ ಸಂಪ್ರದಾಯದಂತೆ ದೀಪ ಹಚ್ಚಿ ಒಂದು ಶಿಲೆ, ಕೇಪಳ ಹೂವು, ಜೇನು, ಹಾಲು ಮತ್ತು ಸೀಯಾಳದ ನೀರು ಸುರಿದು ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಶಿಲಾ ಮುಹೂರ್ತ ನಡೆಸಲಾಯಿತು. ಕೊರಗರ ಡೋಲು, ಚೆಂಡೆ ಮತ್ತು ಕೊಳಲು ನಿನಾದ ಅನುರಣನಗೊಂಡಿತ್ತು.

    ಕೊರಗಜ್ಜ ಸ್ಥಾನ ಶಿಥಿಲಗೊಂಡಿರುವ ಬಗ್ಗೆ ಮಾ.5ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಆ ಬಳಿಕ ಬಾರಕೂರು ಪರಿಸರದ ಜನ ಮತ್ತು ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಗುಡಿ ನಿರ್ಮಾಣಕ್ಕೆ ನೆರವಿನ ಭರವಸೆ ಹರಿದು ಬರತೊಡಗಿತ್ತು. ಪ್ರತಾಪ್ ಹೆಗ್ಡೆ ಮಾರಾಳಿ 25,000 ರೂ. ವೈಯಕ್ತಿಕ ನೆರವು ಘೋಷಿಸಿ ಸರ್ಕಾರದಿಮದಲೂ ಅನುದಾನದ ಭರವಸೆ ನೀಡಿದ್ದಾರೆ. ಯಡ್ತಾಡಿ ಗ್ರಾಪಂನ ಲತಾ, ಬಾಬು ನಾಯ್ಕ, ಲೋಕೇಶ್, ಗೌತಮ್ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
    ನೆರವು ನೀಡುವವರು ಬಾರಕೂರು ಹೇರಾಡಿ ಯೂನಿಯನ್ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ 520101060390227, (ಐಎಫ್‌ಎಸ್‌ಸಿ: ಯುಬಿಐಎನ್902403)ಗೆ ಹಣ ಕಳುಹಿಸಬಹುದು. ಸಂಪರ್ಕ ಸಂಖ್ಯೆ 9481143959.

    ಜನರ ಮುಂದೆ ದೇವರ ಗುಡಿ ನಿರ್ಮಾಣ ಮಾಡುವ ಕುರಿತು ಮನವರಿಕೆ ಮಾಡಿದಾಗ ಅನೇಕರು ನಾನಾ ರೂಪದಲ್ಲಿ ವಸ್ತು ಮತ್ತು ಹಣ ನೀಡಲು ಮುಂದೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಗುಡಿ ನಿರ್ಮಾಣಕ್ಕೆ ತೊಡಗಿದ್ದೇವೆ.
    ಗಣೇಶ ಕೊರಗ ಬಾರಕೂರು ರಂಗನಕೆರೆ
    ಅಧ್ಯಕ್ಷರು ಹುಬಾಶಿಕಾ ಕೊರಗರ ಯುವಕಲಾ ವೇದಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts