More

    ಸರ್ವರೋಗಕ್ಕೂ ಯೋಗ ರಾಮಬಾಣ; ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಅಭಿಮತ

    ಯಲಬುರ್ಗಾ: ಮನುಷ್ಯ ತನ್ನ ಜೀವಿತಾವಧಿಯಲ್ಲಿ ಆತ್ಮಸಂತೋಷ ಹಾಗೂ ಪರರಿಗಾಗಿ ಸೇವೆ ಸಲ್ಲಿಸಬೇಕು ಎಂದು ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ತಿಳಿಸಿದರು.

    ಹಿರೇವಂಕಲಕುಂಟಾದ ಸರ್ಕಾರಿ ಮಾದರಿ ಹಿಪ್ರಾ ಶಾಲೆಯಲ್ಲಿ ಬುಧವಾರ ಸ್ವಾತಂತ್ರ್ಯ ಹೋರಾಟಗಾರ ರಾಜಗುರು ಜನ್ಮದಿನ ಮತ್ತು ಹತ್ತು ದಿನಗಳ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರತಿಯೊಬ್ಬರೂ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗದಲ್ಲಿ ಪಾಲ್ಗೊಳ್ಳಬೇಕು. ಸರ್ವರೋಗಕ್ಕೂ ಯೋಗ ರಾಮಬಾಣವಾಗಿದೆ. ರಚನಾತ್ಮಕ ಕಾರ್ಯಕ್ರಮಗಳ ಮೂಲಕ ತಮ್ಮದೆ ಛಾಪು ಮೂಡಿಸುತ್ತಿರುವ ವಿಶ್ವಬಂಧು ಸೇವಾ ಗುರುಬಳಗದ ಕಾರ್ಯ ಶ್ಲಾಘನಾರ್ಹ ಎಂದರು.

    ಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ಕ್ರಿಯಾಶೀಲ ಹಾಗೂ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡುತ್ತಿದ್ದಾರೆ ಎಂದರು. ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರ ವೀರೇಶ ಬಂಗಾರಶೆಟ್ಟರ್ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಧರಣಾ, ಸಿಆರ್‌ಪಿ ಮಾನಪ್ಪ ಪತ್ತಾರ, ಶಿಕ್ಷಕರಾದ ಕೃಷ್ಣಾ ಪತ್ತಾರ, ವೀರೇಶ ಪಾಟೀಲ್, ಆಂಜನೇಯ ಈಳಗೇರ್, ಸಂಗಯ್ಯ ಹಿರೇಮಠ, ಶಿವಕುಮಾರ ಹೊಂಬಳ, ಪ್ರಭಯ್ಯ ಬಳಗೇರಿಮಠ, ಸಿದ್ದಪ್ಪ ಸಜ್ಜಗಾರ, ಯೋಗ ಶಿಕ್ಷಕರಾದ ವಿರೂಪಾಕ್ಷಿ, ಮುತ್ತಣ್ಣ, ನಾರಾಯಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts