More

    ಶ್ರೀ ಶಿವಶಾಂತವೀರ ಶಿವಯೋಗಿಗಳ ಸ್ಮರಣೆ

    ಕೊಪ್ಪಳ: ಗವಿಮಠದ ಲಿಂ.ಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯಾರಾಧನೆ ನಿಮಿತ್ತ ನಗರದ ಮಳೇಮಲ್ಲೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ಗುರುವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಸಾಂಗವಾಗಿ ನೆರವೇರಿತು.

    ಅಭಿನವ ಗವಿಶ್ರೀಗಳ ನೇತೃತ್ವದಲ್ಲಿ ನಡೆದ ಯಾತ್ರೆಯಲ್ಲಿ ಹೆಬ್ಬಾಳದ ನಾಗಭೂಷಣ ಶಿವಾಚಾರ್ಯರು, ಡಾ.ಹಿರಿಶಾಂತವೀರ ಮಹಾಸ್ವಾಮಿ, ಮೈನಳ್ಳಿಯ ಶಿವಾಚಾರ್ಯರು, ಚಿಕೇನಕೊಪ್ಪದ ಚನ್ನವೀರ ಶರಣರು ಪಾಲ್ಗೊಂಡಿದ್ದರು. ಮಳೇ ಮಲ್ಲೇಶ್ವರ ಬೆಟ್ಟದಿಂದ ಆರಂಭವಾದ ಯಾತ್ರೆ ಅಶೋಕ ವೃತ್ತ, ಗಡಿಯಾರ ಕಂಬ ವೃತ್ತ ಮಾರ್ಗವಾಗಿ ಗವಿಮಠ ತಲುಪಿತು. ವಿದ್ಯಾರ್ಥಿಗಳು, ಮಹಿಳೆಯರು, ಯುವಕರು ಸೇರಿ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಬಳಿಕ ಗವಿಮಠಕ್ಕೆ ಭೇಟಿ ನೀಡಿ ಶಿವಶಾಂತವೀರರ ಗದ್ದುಗೆ ದರ್ಶನ ಪಡೆದು ಪುನೀತರಾಗಿ ಪ್ರಸಾದ ಸೇವಿಸಿ ಮರಳಿದರು.

    ಬೆಳಗ್ಗೆ 10ಗಂಟೆಗೆ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ಸಂಧಿರೋಗ, ನರರೋಗ, ಚರ್ಮರೋಗ,ಅಲರ್ಜಿ, ಬೊಜ್ಜು, ಆಮ್ಲಪಿತ್ತ, ಮಧುಮೇಹ, ನಿದ್ರಾಹೀನತೆ, ಜೀರ್ಣಾಂಗ ಸಮಸ್ಯೆ, ಉಸಿರಾಟದ ತೊಂದರೆ, ಮೂಲವ್ಯಾಧಿ, ಕಿಡ್ನಿ ಸ್ಟೋನ್, ಮೂತ್ರನಾಳದ ಸೋಂಕು, ಕಣ್ಣಿನ ಪೊರೆ, ರೇಟಿನಾ ಸಮಸ್ಯೆ ಸೇರಿ ಇತರ ಕಾಯಿಲೆವುಳ್ಳ ಜನರಿಗೆ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts