More

    ಗೊಂಡಬಾಳ-ಬೆಳಗಟ್ಟಿ ರಸ್ತೆ ದುರಸ್ತಿ ಮಾಡಿ: ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿಗೆ ರೈತರ ಮನವಿ

    ಕೊಪ್ಪಳ: ಗೊಂಡಬಾಳದಿಂದ ಬೆಳಗಟ್ಟಿಗೆ ಸಂಪರ್ಕಿಸುವ ರಸ್ತೆ ದುರಸ್ತಿ ಮಾಡಿಸುವಂತೆ ಒತ್ತಾಯಿಸಿ ರೈತರು ಶುಕ್ರವಾರ ಸಂಸದ ಸಂಗಣ್ಣ ಕರಡಿಗೆ ನಗರದ ಅವರ ನಿವಾಸದಲ್ಲಿ ಮನವಿ ಸಲ್ಲಿಸಿದರು.

    ಈ ಭಾಗದ ಹಲವು ಗ್ರಾಮಗಳ ರೈತರು ಕಬ್ಬು ಬೆಳೆಯುತ್ತಿದ್ದು ಮುಂಡರಗಿಯ ವಿಜಯನಗರ ಸಕ್ಕರೆ ಕಾರ್ಖಾನೆಗೆ ಕಳಿಸುತ್ತಾರೆ. ಆದರೆ, ಈ ರಸ್ತೆ ಹದಗೆಟ್ಟಿದ್ದು, ದಿನದಿಂದ ದಿನಕ್ಕೆ ಸಂಚಾರ ಕಷ್ಟವಾಗುತ್ತಿದೆ. ಈ ವರ್ಷ ಅಕ್ಟೋಬರ್‌ನಲ್ಲಿ ಕಬ್ಬು ಕಟಾವು ನಡೆಯಲಿದ್ದು, ಸಾಗಣೆ ಮತ್ತಷ್ಟು ಕಷ್ಟವಾಗಲಿದೆ. 4700 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದು 1.50 ಲಕ್ಷ ಮೆಟ್ರಿಕ್ ಟನ್ ಇಳುವರಿ ಬರುವ ನಿರೀಕ್ಷೆಯಿದೆ. ರಸ್ತೆಯಲ್ಲಿ ನಿತ್ಯ 60ಕ್ಕೂ ಹೆಚ್ಚು ಕಬ್ಬು ಸಾಗಣೆ ವಾಹನಗಳು ಓಡಾಡುತ್ತವೆ. ತಗ್ಗು ಗುಂಡಿಗಳು ಬಿದ್ದಿದ್ದು ಸಂಚಾರ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

    ಮೈನಳ್ಳಿ-ಬೆಳಗಟ್ಟಿವರೆಗಿನ 18 ಕಿಮೀ, ಗೊಂಡಬಾಳ-ಹಿರೇಸಿಂದೋಗಿ ಗ್ರಾಮದವರೆಗೆ 10 ಕಿಮೀ ರಸ್ತೆ ದುರಸ್ತಿ ಮಾಡಿಸಬೇಕು. ರಘುನಾಥನ ಹಳ್ಳಿ ಬಳಿ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ರೈತರಾದ ವಿರೂಪಾಕ್ಷ ರಡ್ಡಿ, ಮುತ್ತುರಾಜ, ರಾಮಪ್ಪ, ಪ್ರಭು, ಮಂಜಪ್ಪ ಯತ್ನಟ್ಟಿ, ಸಿದ್ದಪ್ಪ ದೇವರಮನಿ, ರಾಮಪ್ಪ ಸಿಂಟ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts