More

    ಸಮಾಜದ ಪರಿವರ್ತನೆಗೆ ಶ್ರಮಿಸಿದ ಸಂತ ವೇಮನ

    ಕೊಪ್ಪಳ: ತನ್ನನ್ನು ತಾನು ಪರಿವರ್ತಿಸಿಕೊಳ್ಳುವುದರೊಂದಿಗೆ ಸಮಾಜ ಬದಲಾವಣೆಗೆ ಶ್ರಮಿಸಿದ ಸಂತ ಮಹಾಯೋಗಿ ವೇಮನ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.

    ನಗರದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಜಿಲ್ಲಾಡಳಿತ ಗುರುವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾನವೀಯ ಮೌಲ್ಯಗಳ ಶ್ರೇಷ್ಠತೆ ಸಾರಿದ ವೇಮನವರು ಕಾವ್ಯಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದವರು. ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ನೀಡಿದ ಬೋಧನೆಯಿಂದ ವೇಮನ ಮಹಾ ಯೋಗಿಯಾದರು. ಅಂಥ ಮಹನೀಯರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರಡ್ಡಿ ಭೂಮಕ್ಕನವರ ಮಾತನಾಡಿ, ತತ್ವಜ್ಞಾನಿ, ದಾರ್ಶನಿಕ ವೇಮನ ರಾಜಮನೆತನದಲ್ಲಿ ಹುಟ್ಟಿದರೂ ಸಮಾಜ ಸುಧಾರಣೆಗೆ ಯತ್ನಿಸಿದರು. ಅವರಂತೆ ಅನೇಕ ದಾರ್ಶನಿಕರು ಕಾಲ ಕಾಲಕ್ಕೆ ಸಮಾಜಕ್ಕೆ ಸಂದೇಶ ನೀಡುತ್ತ ಬಂದಿದ್ದಾರೆ. ಅವುಗಳನ್ನು ಸಾಧ್ಯವಾದಷ್ಟು ಪಾಲಿಸಬೇಕಿದೆ ಎಂದರು.

    ಡಿಡಿಪಿಐ ಎಂ.ಎ.ರಡ್ಡೇರ ಉಪನ್ಯಾಸ ನೀಡಿ ಮಾತನಾಡಿ, ವೇಮನರು ಸರಳ ಭಾಷೆಯಲ್ಲಿ ಚತುಷ್ಪದಿಗಳನ್ನು ರಚಿಸುವ ಮೂಲಕ ಜೀವನ ಮೌಲ್ಯಗಳನ್ನು ಜಾಗೃತಗೊಳಿಸಿದರು. ವಿವಿಧ ಭಾಷೆಗಳಲ್ಲಿ ಪ್ರಕಟಗೊಂಡ ವೇಮನರ ಪದ್ಯಗಳಿಗೆ ವಿದೇಶಿಗರಿಂದಲೂ ಪ್ರಶಂಸೆ ವ್ಯಕ್ತವಾಗಿದೆ ಎಂದರು.

    ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಗ್ರೇಡ್-2 ತಹಸೀಲ್ದಾರ್ ಗವಿಸಿದ್ದಪ್ಪ ಮಣ್ಣೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ನಗರಸಭೆ ಪೌರಾಯುಕ್ತ ಎಚ್.ಎನ್.ಭಜಕ್ಕನವರ, ಸಮುದಾಯ ಮುಖಂಡರಾದ ಪ್ರಭು ಹೆಬ್ಬಾಳ, ಸಿ.ವಿ ಚಂದ್ರಶೇಖರ, ಎಚ್.ಎಲ್.ಹಿರೇಗೌಡರ್, ಬಸವರೆಡ್ಡಿ ಹಳ್ಳಿಕೇರಿ, ಬಸವರಾಜ ಪುರದ, ಬಸವರೆಡ್ಡಿ ಮಾದಿನೂರು, ವಿರುಪಣ್ಣ ನವೋದಯ, ಮಹಾಂತೇಶ ಮಲ್ಲನಗೌಡರ್, ವಿ.ಬಿ.ರಡ್ಡೇರ್, ಯಂಕಾರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts