More

    ಶರಣರ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ; ಯಲಬುರ್ಗಾ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ

    ಕುಕನೂರು: ಜಾತ್ರೆಗಳು ಎಲ್ಲ ಸಮುದಾಯದವರನ್ನು ಒಗ್ಗೂಡಿಸುವ ಮೂಲಕ ಸಾಮರಸ್ಯ ಸಾರುತ್ತವೆ ಎಂದು ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.
    ಬಿನ್ನಾಳ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರೋತ್ಸವ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಧಾರ್ಮಿಕ ಆಚರಣೆಗಳು ಮನುಷ್ಯನ ಅವಿಭಾಜ್ಯ ಅಂಗ. ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಬದುಕಿಗೆ ನಿಜ ಅರ್ಥ ಬರುತ್ತದೆ ಎಂದರು.
    ಕುಕನೂರು ಅನ್ನದಾನೇಶ್ವರ ಶಾಖಾಮಠದ ಡಾ.ಮಾಹಾದೇವ ದೇವರು, ಮೈನಳ್ಳಿ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಮಾತೋಶ್ರೀ ಗೌರಮ್ಮ, ಗ್ರಾಪಂ ಸದಸ್ಯರಾದ ಕಮಲಾಕ್ಷಿ ಶಿವಪುತ್ರಪ್ಪ ಕಂಬಳಿ, ದಾಕ್ಷಾಯಿಣಿ ತಹಸೀಲ್ದಾರ್, ಚನ್ನಮ್ಮ ವೀರಪ್ಪ ಮುತ್ತಾಳ, ಗುರಪ್ಪ ಪಂತರ, ಮಹ್ಮದ್ ಸಾಬ್ ವಾಲಿಕಾರ್, ಜಾನಪದ ಕಲಾವಿದ ಜೀವನ ಸಾಬ್ ಬಿನ್ನಾಳ, ಮಲ್ಲು ಮಾಟರಂಗಿ, ಚನ್ನಯ್ಯ ಹಿರೇಮಠ, ಶಂಕರಯ್ಯ ಕಲ್ಲೂರು, ಡಾ.ಶಂಕರ ಬಿನ್ನಾಳ, ಕಲ್ಲಪ್ಪ, ಮಾಬು ಸಾಬ್, ಸಂತೋಷ, ಬಸವರಾಜ ಇತರರಿದ್ದರು.
    ರಥೋತ್ಸವ ಅದ್ದೂರಿ: ಸಂಜೆ ಶ್ರೀಬಸವೇಶ್ವರ ಮಹಾರಥೋತ್ಸವ ವಿವಿಧ ಗ್ರಾಮಗಳ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಪುನೀತ್ ರಾಜಕುಮಾರ ಅಭಿಮಾನಿಗಳು ಪುನೀತ್ ಫೋಟೋ ಹಿಡಿದು ಜೈಕಾರ ಹಾಕುತ್ತ ಸಾಗಿದರು. ಜಾತ್ರೋತ್ಸವ ನಿಮಿತ್ತ ಬಾಲಬಸವನ ಮೆರವಣಿಗೆ ನಡೆಸಲಾಯಿತು. ಭಕ್ತರಿಗೆ ಗೋಧಿ ಹುಗ್ಗಿ, ಬದನೆ ಕಾಯಿ ಪಲೃ, ಅನ್ನ, ಸಾಂಬರ್ ವ್ಯವಸ್ಥೆ ಮಾಡಲಾಗಿತ್ತು. ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ರಾಜೂರು, ಮುಖಂಡರಾದ ಬಸವನಗೌಡ ತೊಂಡಿಹಾಳ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಶಂಭು ಜೋಳದ, ಮಾರುತಿ ಗಾವರಾಳ, ಸಚಿನ ಆಚಾರ್, ಕರಿಬಸಯ್ಯ ಬಿನ್ನಾಳ, ಹನುಮಂತಪ್ಪ ಹಂಪನಾಳ, ಬಸವರಾಜ ಹಾಳಕೇರಿ, ಸಿದ್ದು ಉಳ್ಳಾಗಡ್ಡಿ, ಲಕ್ಷ್ಮಣ್ಣ ಕಾಳಿ, ಸಂಗಯ್ಯ ಮಾಸ್ತರ, ಶಿವಬಸಯ್ಯ ಹಿರೇಮಠ, ಮಲ್ಲಿಕಾರ್ಜುನ, ಮಹಾಂತೇಶ ಹೂಗಾರ, ಗೌರಮ್ಮ, ಪ್ರಕಾಶ ತಹಸೀಲ್ದಾರ್ ಇತರರಿದ್ದರು.

    ಶರಣರ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ; ಯಲಬುರ್ಗಾ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ
    ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಶ್ರೀ ಬಸವೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗಿತು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts