More

    ಶ್ರೀ ರಾಯರ ಮಹಾರಥೋತ್ಸವ ಅದ್ದೂರಿ: ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಪನ್ನ

    ಗಂಗಾವತಿ: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ನಗರದ ರಾಯರ ಮಠದಲ್ಲಿ ಭಾನುವಾರ ವಿಜೃಂಭಣೆಯಿಂದ ಮಹಾರಥೋತ್ಸವ ನಡೆಯಿತು.
    ಮೃತ್ತಿಕಾ ವೃಂದಾವನಕ್ಕೆ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ, ಹೂವು ಮತ್ತು ಹಣ್ಣಿನ ಅಲಂಕಾರ, ನಿರಂತರ ಭಜನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸರ್ವಾಲಂಕೃತ ರಥೋತ್ಸವವನ್ನು ರಾಯರಮಠದಿಂದ ಸುಂಕದಕಟ್ಟೆ ಪ್ರಾಣದೇವರ ದೇವಾಲಯದವರೆಗೆ ಎಳೆಯಲಾಯಿತು. ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳಳು ಎಲ್ಲವರ್ಗದ ಆರಾಧ್ಯ ದೈವವಾಗಿದ್ದಾರೆ ಎಂದರು.

    ರಥೋತ್ಸವ ನಂತರ ಡೋಲೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ, ಅನ್ನಸಂತರ್ಪಣೆ ಮತ್ತು ಶ್ರೀ ವಿಜಯವಿಠ್ಠಲ ಮಹಿಳಾ ಭಜನೆ ಮಂಡಳಿಯಿಂದ ಹರಿಕಥಾಮೃತಸಾರ ಪಾರಾಯಣ ನೆರವೇರಿಸಲಾಯಿತು. ವಿಚಾರಣ ಕರ್ತ ರಾಮಕೃಷ್ಣ ಜಹಾಗೀರದಾರ್, ಮುಖಂಡರಾದ ನಾಗರಾಜಾಚಾರ್, ಗುರುರಾಜ್ ಚಿರ್ಚನಗುಡ್ಡ, ದರೋಜಿ ಶ್ರೀರಂಗಶ್ರೇಷ್ಟಿ, ಹೇರೂರು ಪ್ರಹ್ಲಾದರಾವ್, ನರಸಿಂಗರಾವ್ ಕುಲ್ಕರ್ಣಿ, ಎಚ್.ರವೀಂದ್ರ, ಹೇರೂರು ಗೋಪಿನಾಥ, ಅಪ್ಪಣ್ಣ ದೇಶಪಾಂಡೆ, ಹನುಮಂತರಾವ್ ಕುಲ್ಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts