More

    ಪ್ರಬಂಧ ಸ್ಪರ್ಧೆಯಲ್ಲಿ ತ್ರಿವೇಣಿ ಪ್ರಥಮ: ಡಿಸಿ ಕಾರ್ಯವೈಖರಿ ತಿಳಿಯಲು ಅವಕಾಶ

    ಕೊಪ್ಪಳ: ವಿಶ್ವ ಯುವ ಕೌಶಲ ದಿನ ನಿಮಿತ್ತ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ನಗರದ ಡಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಕೌಶಲ ಸ್ಫೂರ್ತಿ ಪ್ರಬಂಧ ಸ್ಫರ್ಧೆಯಲ್ಲಿ ವಿದ್ಯಾರ್ಥಿನಿ ಪಿ.ತ್ರಿವೇಣಿ ಪ್ರಥಮ ಸ್ಥಾನ ಪಡೆದಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಎಂ.ಸುಂದರೇಶ ಸನ್ಮಾನಿಸಿ, ತ್ರಿವೇಣಿ ಜತೆ ಚರ್ಚೆ ಚಚಿಸಿದರು.

    ಕುಟುಂಬದ ಹಿನ್ನೆಲೆ, ವಿದ್ಯಾಭ್ಯಾಸದ ವಿವರ ಪಡೆದರು. ಅಲ್ಲದೆ ಮುಂದಿನ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿ ತಯಾರಿ ನಡೆಸಬೇಕೆಂದು ಮಾರ್ಗದರ್ಶನ ನೀಡಿದರು. ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರಾಣೇಶ್ ಮಾತನಾಡಿ, ವಿದ್ಯಾರ್ಥಿನಿಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಕೆಗೆ ಬೇಕಾದ ಪುಸ್ತಕಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

    ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಖುಷಿ ಇದೆ. ಅಲ್ಲದೆ ಜಿಲ್ಲಾಧಿಕಾರಿ, ಕಚೇರಿ ಸಿಬ್ಬಂದಿ ಕಾರ್ಯವೈಖರಿ ತಿಳಿಯಲು ಒಂದು ದಿನ ಅವಕಾಶ ನೀಡಿದ್ದು, ಮರೆಯುವುದಿಲ್ಲ ಎಂದು ತ್ರಿವೇಣಿ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts