More

    ಗ್ರಹಣ ಅಂಗವಾಗಿ ಹುಲಿಗೆಮ್ಮ ದರ್ಶನ ನಿರ್ಬಂಧ

    ಕೊಪ್ಪಳ: ಗೌರಿ ಹುಣ್ಣಿಮೆ ಅಂಗವಾಗಿ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು. ಗ್ರಹಣ ಕಾರಣ ಮಧ್ಯಾಹ್ನ 1ಗಂಟೆಯಿಂದ ರಾತ್ರಿ 7.45ವರೆಗೆ ದರ್ಶನ ನಿಷೇಧಿಸಿದ್ದರಿಂದ ಭಕ್ತರು ಪರದಾಡುವಂತಾಯಿತು.

    ಸಾಮಾನ್ಯವಾಗಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಂದು ದೇವಸ್ಥಾನಕ್ಕೆ ಅಧಿಕ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಈ ಬಾರಿ ಮಂಗಳವಾರ ದಿನದಂದೇ ಹುಣ್ಣಿಮೆ ಬಂದಿದ್ದರಿಂದ ಜಿಲ್ಲೆ, ಹೊರ ಜಿಲ್ಲೆ, ರಾಜ್ಯದಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು. ಬೆಳಗ್ಗೆ 4ಗಂಟೆಯಿಂದಲೇ ದರ್ಶನ ಪಡೆದುಕೊಂಡರು. ಏಕಕಾಲಕ್ಕೆ ಸಹಸ್ರಾರು ಭಕ್ತರು ಸೇರಿದ ಕಾರಣ ದೇವಾಲಯ ಆವರಣದಲ್ಲಿ ನೂಕು ನುಗ್ಗಲು ಕಂಡುಬಂತು. ಚಂದ್ರ ಗ್ರಹಣ ಹಿನ್ನೆಲೆ ಮಧ್ಯಾಹ್ನ 1ಗಂಟೆಗೆ ದೇವಾಲಯ ಬಾಗಿಲಿಗೆ ಬೀಗ ಹಾಕಲಾಯಿತು.

    ಹೀಗಾಗಿ ದೇವಸ್ಥಾನ ಆವರಣದಲ್ಲೇ ಭಕ್ತರು ಮಲಗಿಕೊಂಡರು. ರಾತ್ರಿ 7.45ಕ್ಕೆ ಗ್ರಹಣ ಮುಕ್ತಾಯವಾದ ನಂತರ ಶುದ್ಧಿಗೊಳಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ತಡರಾತ್ರಿವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಗ್ರಹಣ ಇದ್ದರೂ ಕೊಪ್ಪಳದ ಗವಿಮಠದಲ್ಲಿ ದೇವರ ದರ್ಶನಕ್ಕೆ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಎಂದಿನಂತೆ ಗವಿಸಿದ್ದೇಶನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಗ್ರಹಣ ಅವಧಿಯಲ್ಲಿ ಭಕ್ತರೇ ಸ್ವಯಂ ಪ್ರೇರಿತವಾಗಿ ದೇವಸ್ಥಾನಕ್ಕೆ ಆಗಮಿಸಲಿಲ್ಲ. ಕೆಲವೊಂದಿಷ್ಟು ಜನರು ದರ್ಶನ ಪಡೆದು ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts