More

    ಸ್ಪರ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಿ: ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಸಲಹೆ

    ಕೊಪ್ಪಳ: ಆರೋಗ್ಯ ವೃದ್ಧಿಗೆ ಕ್ರೀಡೆಗಳು ಸಹಕಾರಿಯಾಗಿದ್ದು, ಸ್ಪರ್ಧಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದು ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಹೇಳಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳ ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆಯು ದಿ.ರವಿ ಉಕ್ಕುಂದ ಸ್ಮರಣಾರ್ಥ ಆಯೋಜಿಸಿದ್ದ ಧ್ರುವತಾರೆ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಮಾತನಾಡಿದರು. ಕರ್ನಾಟಕ ವಾರಿಯರ್ಸ್ ಕ್ರೀಡಾ ಸಂಸ್ಥೆ ಸಮಾಜಮುಖಿ ಕಾರ್ಯಗಳಲ್ಲೂ ಮುಂಚೂಣಿಯಲ್ಲಿದೆ. ರವಿ ಉಕ್ಕುಂದ ಅವರಂಥ ಮನಸುಗಳು ಸಂಸ್ಥೆಯಲ್ಲಿ ಇರುವುದರಿಂದ ಅದಕ್ಕೊಂದು ಘನತೆ ಬಂದಿದೆ ಎಂದರು.

    ಲೆಕ್ಕ ಪರಿಶೋಧಕ ವಿ.ಬಿ.ಅಂಗಡಿ ಮಾತನಾಡಿ, ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜ. ಇಲ್ಲಿ ಯಾವುದೇ ತಂಡ ಗೆದ್ದರೂ ಅದು ರವಿ ಉಕ್ಕುಂದ ಅವರಿಗೆ ಅರ್ಪಣೆಯಾಗಲಿದೆ ಎಂದರು. ರವಿ ಉಕ್ಕುಂದ ಪುತ್ರ ಆರ್ಯನ್, ಪ್ರಮುಖರಾದ ಬಸವರಾಜ ಕರುಗಲ್, ಹನುಮಂತಪ್ಪ ಓಲೇಕಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ ಉಕ್ಕುಂದ, ನಗರಸಭೆ ಪೌರಾಯುಕ್ತ ಭಜಕ್ಕನವರ್, ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ, ಗಿರೀಶ ಮುಂಡಾದ, ಶ್ರೀನಿವಾಸ ಜಿ., ರೇವಣಸಿದ್ದಪ್ಪ, ಕನಕಪ್ಪ, ಮಾರುತಿ ಮ್ಯಾಗಳಮನಿ, ದೇವೇಂದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts