More

    ಗೊಂದಲ ಸರಿಪಡಿಸಿಕೊಂಡು ಒಗ್ಗಟ್ಟಾಗೋಣ: ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿಕೆ

    ಕೊಪ್ಪಳ: ಜಾತಿ, ಧರ್ಮದ ಬೇಧ ತೊಡೆದು ಮಾನವೀಯತೆಯ ಧರ್ಮ ಸಾರಿದವರು ನಾರಾಯಣ ಗುರುಗಳು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

    ನಗರದ ಸಾಹಿತ್ಯ ಭವನದಲ್ಲಿ ಆರ್ಯ ಈಡಿಗ ಸಂಘ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಸೇವಾ ಸಮಿತಿಯಿಂದ ಶುಕ್ರವಾರ ಏರ್ಪಡಿಸಿದ್ದ ನಾರಾಯಣ ಗುರುಗಳ 168ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾರಾಯಣ ಗುರುಗಳ ಲವಾಗಿ ಇಂದು ಹಿಂದುಳಿದ ವರ್ಗದವರು ಶಾಸಕರು, ಅಧಿಕಾರಿಗಳಾಗುತ್ತಿದ್ದಾರೆ. ಸಿನಿಮಾ ರಂಗದಲ್ಲಿ ರಾಜಕುಮಾರ್, ರಾಜಕೀಯದಲ್ಲಿ ಬಂಗಾರಪ್ಪ, ನ್ಯಾಯಾಂಗದಲ್ಲಿ ದತ್ತು ಅಂಥವರು ಸಾಧನೆ ಮಾಡಲು ಸಾಧ್ಯವಾಗಿದೆ. ಸಿದ್ದರಾಮಯ್ಯ ತಮ್ಮ ಆಡಳಿತದಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪನೆ, ಸರ್ಕಾರಿ ಜಯಂತಿ ಆಚರಣೆ, ಪಠ್ಯದಲ್ಲಿ ಅವರ ಬಗ್ಗೆ ಪಾಠ ಸೇರಿಸಿದರು. ಗುರುಗಳಿಗೆ ಅಗೌರವ ತೋರಿದವರಿಗೆ ಧಿಕ್ಕಾರ ಹಾಕಬೇಕಿದೆ. ಸಮುದಾಯದಲ್ಲಿ ಗೊಂದಲವಿದೆ. ಸರಿಪಡಿಸಿಕೊಂಡು ಎಲ್ಲರೂ ಒಗ್ಗಟ್ಟಾಗಬೇಕು. ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಘಟನೆಯ ಮೂಲಕ ನಮ್ಮ ಹಕ್ಕು ಪಡೆಯಬೇಕು ಎಂದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಕೇರಳದಲ್ಲಿ ಜನಿಸಿದ ನಾರಾಯಣ ಗುರುಗಳು ಎಲ್ಲರೂ ಸಮಾನರೆಂದು ಸಾರಿದರು. ಈಡಿಗ ಸಮುದಾಯ ಸಣ್ಣದಿದ್ದರೂ ಶಕ್ತಿ ದೊಡ್ಡದಿದೆ. ಮಾಜಿ ಸಿಎಂ ಬಂಗಾರಪ್ಪ ಕೊಡುಗೆ ಅಪಾರ. ಸಿನಿಮಾ ರಂಗದಲ್ಲಿ ರಾಜಕುಮಾರ್ ಕುಟುಂಬದ ಸೇವೆಯೂ ಗಣನೀಯ ಎಂದರು.

    ವಿಪ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಮಾತನಾಡಿ, ಶೋಷಿತರು, ದಲಿತರಿಗೆ ಗುರುಗಳು ಧ್ವನಿಯಾಗಿದ್ದರು. ಬಸವಣ್ಣನವರ ನಂತರ ಸಮ ಸಮಾಜಕ್ಕಾಗಿ ಶ್ರಮಿಸಿದವರು. ಸಣ್ಣ ಸಮುದಾಯದವರಾದರೂ ನಮ್ಮ ತಂದೆ ರಾಮುಲು ಅವರನ್ನು ಜಿಲ್ಲೆಯ ಜನ ಐದು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಸಣ್ಣ ಸಮುದಾಯಗಳೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವುದು. ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚಿಸಬೇಕು. ನಾವೆಲ್ಲ ನಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದರು.

    ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿದರು. ಸೋಲೂರು ಮಹಾ ಸಂಸ್ಥಾನದ ವಿಖ್ಯಾತನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್ಯ ಈಡಿಗ ಸಂಘದ ಗೌರವಾಧ್ಯಕ್ಷ ಪ್ರದೀಪ್ ಹಾನಗಲ್ ಮತ್ತು ಅಧ್ಯಕ್ಷ ಈರಣ್ಣ ಹುಲಿಗಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಬೆಂಗಳೂರು ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಲಕ್ಷ್ಮೀನರಸಯ್ಯ, ಖಜಾಂಚಿ ಕುಸುಮಾ ಅಜಯ್, ಸಂಘದ ರಾಜ್ಯ ಸಂ.ಕಾರ್ಯದರ್ಶಿ ಬಸವರಾಜ್ ಗೋಕಾಕ, ಚಂದ್ರಶೇಖರ್, ಸಿದ್ದರಾಮಪ್ಪ, ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ, ಸಂಘದ ತಾಲೂಕು ಅಧ್ಯಕ್ಷರಾದ ವೆಂಕಟೇಶ ಈಳಿಗೇರ್ ಮಂಜುನಾಥ ಈಳಿಗೇರ್, ಉಮಾಕಾಂತ್ ಮಾನ್ವಿ, ಈ.ನಾಗರಾಜ, ಕಾಶಿವಿಶ್ವನಾಥ ಬಿಚ್ಚಾಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts