More

    ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ: ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರ ತಂಡದಿಂದ ಮಾಹಿತಿ ಸಂಗ್ರಹ

    ಕೊಪ್ಪಳ: ಜಿಲ್ಲೆಯಲ್ಲಿ ವಾಸಿಸುತ್ತಿರುವ ಗೌಳಿ, ನೊಳಂಬ, ವೀರಶೈವ ಲಿಂಗಾಯತ ಪಂಚಮಸಾಲಿ, ಆದಿಬಣಜಿಗ, ಕುಡುವಕ್ಕಲಿಗ ಹಾಗೂ ಇತರ ಒಬಿಸಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ನೇತೃತ್ವದ ತಂಡ ಗುರುವಾರ ಸ್ಥಳ ಪರಿಶೀಲನೆ ನಡೆಸಿತು.

    ಕೊಪ್ಪಳ ತಾಲೂಕಿನ ಹಿರೇ ಸಿಂದೋಗಿ, ಹಲಗೇರಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಮುದಾಯಗಳಿಂದ ಅರ್ಜಿ ಸ್ವೀಕರಿಸುವುದರ ಜತೆಗೆ ಜನರ ಅಭಿಪ್ರಾಯ ಸಂಗ್ರಹಿಸಿತು. ಆದಿಬಣಜಿಗ ಮತ್ತು ಲಿಂಗಾಯತ-ಬಣಜಿಗ ಬೇರೆ ಬೇರೆ, ಲಿಂಗಾಯತ-ಬಣಜಿಗ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂದು ಕೆಲವರು ಮನವಿ ಸಲ್ಲಿಸಿದರು. ಎಸ್ಟಿಗೆ ಸೇರಿಸುವಂತೆ ಗಂಗಾಮತ, ಬೇಸ್ತ, ಕುರುಬ ಸಮುದಾಯದವರು ಮನವಿ ಸಲ್ಲಿಸಿದರು. ವೀರಶೈವ ಲಿಂಗಾಯತ ಸಮುದಾಯದವರು ತಮ್ಮ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಮನವಿ ಮಾಡಿದರು. ಲಿಂಗಾಯತ ಗಾಣಿಗವನ್ನು ಹಿಂದು ಗಾಣಿಗ ಮಾಡುವಂತೆ ಅಹವಾಲು ಸಲ್ಲಿಸಿದರು.

    ಜಯಪ್ರಕಾಶ ಹೆಗ್ಡೆ ಮಾತನಾಡಿ, ಎಸ್ಸಿ, ಎಸ್ಟಿಗೆ ಸೇರಿಸಬೇಕೆಂದು ಸಲ್ಲಿಕೆಯಾದ ಮನವಿಗಳನ್ನು ಪಜಾ, ಪಪಂಗಳ ಆಯೋಗಕ್ಕೆ ಸಲ್ಲಿಸಲಾಗುವುದು. ವೀರಶೈವ ಲಿಂಗಾಯತ ಪಂಚಮಸಾಲಿ, ಆದಿಬಣಜಿಗ, ಕುಡುವಕ್ಕಲಿಗ ಹಾಗೂ ಇತರ ಒಬಿಸಿ ಸಮುದಾಯದವರ ಅರ್ಜಿಗಳನ್ನು ಪರಿಶೀಲಿಸಿ, ಆಯಾ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಕೂಡ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ಭರವಸೆ ನೀಡಿದರು.

    ಬಳಿಕ ಗ್ರಾಮದ ವಿವಿಧ ಮನೆಗಳಿಗೆ ಭೇಟಿ ನೀಡಿ ಜನರಿಂದ ಖುದ್ದು ಮಾಹಿತಿ ಪಡೆದರು. ಬಳಿಕ ಕುಕನೂರು ತಾಲೂಕಿನ ತಳಕಲ್ ಗಾಮಕ್ಕೆ ಭೇಟಿ ನೀಡಿದ ತಂಡ ಬಿಸಿಎಂ ವಸತಿ ನಿಯಲದಲ್ಲಿ ಭೋಜನ ಮುಗಿಸಿತು. ಆಯೋಗದ ಸದಸ್ಯರಾದ ಬಿ.ಎಸ್.ರಾಜಶೇಖರ, ಶಾರದಾ ನಾಯಕ, ಕಲ್ಯಾಣಕುಮಾರ್ ಎಚ್.ಎಸ್, ಕೆ.ಟಿ.ಸುವರ್ಣ, ಅರುಣಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts