More

    ಬಂಡವಾಳ ಶಾಹಿಗಳ ಹಿಡಿತದಲ್ಲಿದೆ ಭಾರತ

    ಕೊಪ್ಪಳ: ನೇತಾಜಿ ಸುಭಾಶ್ಚಂದ್ರಬೋಸ್, ಭಗತ್ ಸಿಂಗ್ ಮುಂತಾದ ಕ್ರಾಂತಿಕಾರಿಗಳು ದೇಶ ಸ್ವಾತಂತ್ರೃ ನಂತರ ಸಮಾಜವಾದಿ ರಾಷ್ಟ್ರವಾಗಬೇಕೆಂಬ ಕನಸು ಕಂಡಿದ್ದರು. ಆದರೆ ಗಾಂಧೀಜಿ ನೇತೃತ್ವದ ಗುಂಪು ಉಳ್ಳವರ ಜತೆಗೆ ಇದ್ದರಿಂದ ಬಂಡವಾಳ ಶಾಹಿಗಳ ಕೈಗೆ ಅಧಿಕಾರ ಹೋಯಿತು ಎಂದು ಎಸ್‌ಯುಸಿಐಸಿ ರಾಜ್ಯ ಕಾರ್ಯದರ್ಶಿ ಕೆ.ಉಮಾ ಹೇಳಿದರು.

    ನಗರದ ಮಳೆ ಮಲ್ಲೇಶ್ವರ ಯಾತ್ರಿ ನಿವಾಸದಲ್ಲಿ ಎಐಡಿವೈಒನಿಂದ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಯುವಜನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಭಾರತಕ್ಕೆ ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರೃ ಸಿಕ್ಕಿದೆ. ಆದರೆ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರೃ ಸಿಗಲಿಲ್ಲ. ದೇಶದ ಬೃಹತ್ ಸಂಖ್ಯೆಯ ಜನ ನಿರುದ್ಯೋಗ, ಹಸಿವಿನಿಂದ ಬಳಲುತ್ತಿದ್ದಾರೆ. ಆದರೆ ಬೆರಳೆಣಿಕೆಯ ಬಂಡವಾಳಶಾಹಿಗಳಿಗೆ ಎಲ್ಲ ಸ್ವಾತಂತ್ರೃ ಸಿಕ್ಕಿದೆ. ಗಾಂಧಿವಾದಿಗಳು ಬ್ರಿಟಿಷರೊಂದಿಗೆ ಹಾಗೂ ಉಳಿಗಮಾನ್ಯ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡರು. ಆದ್ದರಿಂದ ಅವರ ದಾರಿ ರಾಜಿಪಂಥ ಆಯಿತು. ಸ್ವಾತಂತ್ರೃ ಸಂಗ್ರಾಮದಲ್ಲಿ ಬೇಡಿಕೆ ಇಡುವ, ರಾಜಿ ಮಾಡಿಕೊಳ್ಳುವ ಸಂಧಾನದ ದಾರಿಗಳೂ ಜರುಗುತ್ತಿದ್ದವು. ಇದರ ಜತೆಯಲ್ಲಿ ರಾಜಿರಹಿತ ಮಾರ್ಗವೂ ಹುಟ್ಟಿಕೊಂಡಿತು. ಎರಡೂ ಪಂಥಗಳಿಂದ ಅಪಾರ ಬಲಿದಾನವಾಗಿದೆ. ಗುರಿ ಒಂದೇ ಇದ್ದರೆ ದಾರಿಯೂ ಒಂದೇ ಇರುತ್ತದೆ. ಒಂದು ದೇಶದ ಸ್ವಾತಂತ್ರೃ ಸಂಗ್ರಾಮವನ್ನು ಈ ಹಿನ್ನೆಲೆಯಲ್ಲಿ ನೋಡಬೇಕಿದೆ ಎಂದರು.

    ಶಿಬಿರದ ಆರಂಭದಲ್ಲಿ ಕ್ರಾಂತಿಕಾರಿ ಚಳವಳಿಯಲ್ಲಿ ಭಾಗವಹಿಸಿ ಹುತಾತ್ಮರಾದವರ ನೆನಪಿಗಾಗಿ ಹುತಾತ್ಮರ ಸ್ತಂಭಕ್ಕೆ ಎಲ್ಲ ನಾಯಕರು ಹೂಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಎಐಡಿವೈಒ ರಾಷ್ಟ್ರೀಯ ಉಪಾಧ್ಯಕ್ಷ ಜಿ.ಶಶಿಕುಮಾರ. ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ, ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ, ಉಪಾಧ್ಯಕ್ಷರಾದ ಚನ್ನಬಸವ ಜಾನೇಕಲ್, ವಿಜಯಕುಮಾರ ಕೆ, ಕೃಷ್ಣ ಬೆಂಗಳೂರ, ವಿನಯ ಸಾರಥಿ, ಜಗನ್ನಾಥ ಕಲಬುರಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts