More

    ಕೊಪ್ಪಳ ಜಿಲ್ಲೆಯಲ್ಲಿ ಮತ್ತೆ ವರುಣಾರ್ಭಟ: ನೀರಲ್ಲಿ ಕೊಚ್ಚಿ ಹೋದ ಮೆಕ್ಕೆಜೋಳ

    ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿಡುವು ನೀಡಿದ್ದ ವರುಣ, ಗುರುವಾರ ಮತ್ತೆ ಆರ್ಭಟಿಸಿದನು. ಸೆಪ್ಟೆಂಬರ್‌ನಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಮಳೆಯಿಂದ ವಾರ ಬಿಡುವು ಸಿಕ್ಕ ಕಾರಣ ಜನ ಜೀವನ ಸಹಜ ಸ್ಥಿತಿಯತ್ತ ಮರಳುವ ಹೊತ್ತಿಗೆ ಮತ್ತೆ ಶುರುವಾಗಿದೆ.

    ಸದ್ಯ ಮೆಕ್ಕೆಜೋಳ, ಸಜ್ಜೆ ಕಟಾವು ಆರಂಭವಾಗಿದ್ದು, ರೈತರು ಎಪಿಎಂಸಿ ಆವರಣ, ರಸ್ತೆ ಬದಿ ಸೇರಿ ಇತರ ಬಯಲು ಪ್ರದೇಶದಲ್ಲಿ ರಾಶಿ ಹಾಕಿದ್ದಾರೆ. ಮಳೆಯಿಂದ ನೆನದಿದ್ದ ಮೆಕ್ಕೆಜೋಳ ಉತ್ಪನ್ನ ಒಣಗಿಸಿ ಮಾರಾಟ ಮಾಡಬೇಕೆನ್ನುವಷ್ಟರಲ್ಲಿ ಮಳೆಗೆ ಮತ್ತೆ ತೋಯ್ದಿದ್ದು, ರೈತರು ಕಣ್ಣೀರು ಹಾಕುವಂತಾಗಿದೆ. ಸತತ ಮಳೆಯಿಂದ ತೇವಾಂಶ ಇನ್ನೂ ಆರಿಲ್ಲ. ರಸ್ತೆಯಲ್ಲಿ ತಾಡಪತ್ರಿ ಹಾಕಿ ಮುಚ್ಚಿದರೂ ನೀರಿನ ಹರಿವು ಹೆಚ್ಚಾಗಿ ನೆನೆಯುವಂತಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಬ್ಬು, ಕೊತ್ತಂಬರಿ, ಮೆಕ್ಕೆಜೋಳ, ಸಜ್ಜೆ ಬೆಳೆಗಳು ಜಲಾವೃತವಾಗಿವೆ. ಹಿರೇಹಳ್ಳ ಜಲಾಶಯ ಭರ್ತಿಯಾಗಿದ್ದು, ಮಳೆ ಮುಂದುವರಿದಲ್ಲಿ ಹಳ್ಳಕ್ಕೆ ನೀರು ಬಿಡುವ ಸಾಧ್ಯತೆ ಅಧಿಕವಾಗಿದೆ. ಹೀಗಾಗಿ ಹಳ್ಳ ವ್ಯಾಪ್ತಿಯ ರೈತರು ಎಚ್ಚರಿಕೆಯಿಂದಿರುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts