More

    ಗ್ರಾಮೀಣರ ಸೇವೆಗೆ ಅಂಚೆ ಇಲಾಖೆ ಅಗತ್ಯ – ಸಂಸದ ಸಂಗಣ್ಣ ಕರಡಿ ಹೇಳಿಕೆ

    ಕೊಪ್ಪಳ: ಗ್ರಾಮೀಣರನ್ನು ತಲುಪುವ ಏಕೈಕ ಅಂಚೆ ಇಲಾಖೆ, ಇಂದಿಗೂ ಸೇವಾ ಮನೋಭಾವನೆಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ನಗರದ ಜಿಲ್ಲಾಡಳಿತ ಭವನದಲ್ಲಿ ನೂತನವಾಗಿ ಆರಂಭಿಸಿರುವ ಉಪ ಅಂಚೆ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

    ರೈಲ್ವೆ ನಂತರ ದೇಶದ ಎರಡನೇ ಅತಿ ದೊಡ್ಡ ಇಲಾಖೆ ಅಂಚೆಯಾಗಿದೆ. ದೇಶದಲ್ಲಿ 1,55,618 ಅಂಚೆ ಕಚೇರಿಗಳಿವೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಜನರಿಗೆ ಉತ್ತಮ ಸೇವೆ ಒದಗಿಸುತ್ತಿವೆ. ಆಧುನಿಕತೆಗೆ ತಕ್ಕಂತೆ ಅಂಚೆ ಇಲಾಖೆ ಹೊಂದಿಕೊಂಡಿದ್ದು, ಹತ್ತಾರು ಸೇವೆಗಳನ್ನು ನೀಡುತ್ತಿದೆ. ಜಿಲ್ಲಾಡಳಿತ ಭವನದಲ್ಲಿ ಹತ್ತಾರು ಇಲಾಖೆಗಳಿವೆ. ನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಇಲ್ಲಿ ಒಂದು ಅಂಚೆ ಕಚೇರಿ ಅಗತ್ಯವಿತ್ತು. ಹೀಗಾಗಿ ಆರಂಭಿಸಲು ಅನುಮತಿ ಕೋರಲಾಗಿತ್ತು. ಜಿಲ್ಲಾಧಿಕಾರಿಗಳು ಅವಕಾಶ ನೀಡಿದ್ದು, ಇಲಾಖೆ ಉಪ ಅಂಚೆ ಕಚೇರಿ ಆರಂಭಿಸಿದ್ದು, ಅಧಿಕಾರಿಗಳು, ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಕೇಂದ್ರ ಸರ್ಕಾರ ಅಂಚೆ ಕಚೇರಿಗಳನ್ನು ಬ್ಯಾಂಕ್‌ಗಳನ್ನಾಗಿ ಪರಿವರ್ತಿಸಿದ್ದು, ಬ್ಯಾಂಕಿಂಗ್ ವ್ಯವಹಾರವನ್ನೂ ಮಾಡಬಹುದು ಎಂದರು.

    ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಮಾತನಾಡಿ, ಅಂಚೆ ಕಚೇರಿ ಆರಂಭಿಸಲು ಸಂಸದರು ಹೆಚ್ಚಿನ ಮುತುವರ್ಜಿ ವಹಿಸಿದ ಕಾರಣ ಇಂದು ಉದ್ಘಾಟನೆಯಾಗಿದೆ. ಜಿಲ್ಲಾಡಳಿತಕ್ಕೆ ಬರುವ ಜನರು ಮತ್ತು ಅಧಿಕಾರಿಗಳಿಗೆ ಅನುಕೂಲವಾಗಲಿದೆ. ಅಂಚೆ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮ ಸೇವೆ ನೀಡುವ ಮೂಲಕ ಇಲಾಖೆಯನ್ನು ಅಭಿವೃದ್ಧಿಪಡಿಸಿ ಎಂದರು. ಸಂಸದ ಸಂಗಣ್ಣ ಮೊದಲು ಅಂಚೆಯನ್ನು ಪೋಸ್ಟ್ ಮಾಡುವ ಮೂಲಕ ಕಚೇರಿ ವ್ಯವಹಾರಕ್ಕೆ ಚಾಲನೆ ನೀಡಿದರು. ಇಲಾಖೆ ಅಧಿಕಾರಿಗಳು ಸಂಸದರು ಹಾಗೂ ಡಿಸಿಗೆ ಸನ್ಮಾನಿಸಿದರು. ಅಂಚೆ ಅಧೀಕ್ಷಕರಾದ ಪಿ.ಚಿದಾನಂದ, ಸಹಾಯಕ ಅಂಚೆ ಅಧೀಕ್ಷಕ ಎಂ.ಎಲ್.ಭಗವಾನ್, ಕೊಪ್ಪಳ ಅಂಚೆ ನಿರೀಕ್ಷಕ ಷಣ್ಮುಖಪ್ಪ ಎಸ್. ಶಿರಹಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts