More

    ಅರ್ಚಕರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಮನವಿ: ಸಂಸದ ಸಂಗಣ್ಣ ಕರಡಿ ಭರವಸೆ

    ಕೊಪ್ಪಳ: ಸಮಾಜದಲ್ಲಿ ಅರ್ಚಕರ ಸೇವೆ ಬಹು ದೊಡ್ಡದು. ಅವರ ಬೇಡಿಕೆಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

    ನಗರದ ಶ್ರೀ ಮಳೆ ಮಲ್ಲೇಶ್ವರ ದೇವಾಲಯ ಸಭಾ ಭವನದಲ್ಲಿ ಅಖಿಲ ಕರ್ನಾಟಕ ವೀರಶೈವ ಅರ್ಚಕ ಪುರೋಹಿತರ ನಿಸ್ವಾರ್ಥ ಸೇವಾ ಸಂಘ ಸೋಮವಾರ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಅರ್ಚಕರ ಅವಶ್ಯಕತೆ ಸಾಕಷ್ಟಿದೆ. ನಮ್ಮ ಆಚರಣೆ, ಸಂಪ್ರದಾಯ ಪಾಲನೆಯಲ್ಲಿ ಇವರ ಪಾತ್ರ ಬಹುಮುಖ್ಯವಾಗಿದೆ. ಇವರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸುವೆ. ಮನಸ್ಸಿಗೆ ನೆಮ್ಮದಿ ನೀಡುವಲ್ಲಿ ಪೂಜೆ, ಹೋಮ ಮುಂತಾದ ಧಾರ್ಮಿಕ ಕಾರ್ಯಗಳು ಬೇಕು. ಅವುಗಳನ್ನು ಶಾಸ್ತ್ರಬದ್ಧವಾಗಿ ನಡೆಸಲು ಅರ್ಚಕರು ಬೇಕು ಎಂದರು.

    ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ್ ಮಾತನಾಡಿ, ಸಂಘದ ಹೆಸರೇ ಹೇಳುವಂತೆ ಇದು ನಿಸ್ವಾರ್ಥ ಸೇವೆ ಮಾಡುವವರ ಸಂಘ. ಇನ್ನೊಬ್ಬರ ಒಳಿತಿಗಾಗಿ ಜ್ಞಾನಾರ್ಜನೆ ಮಾಡಿ ವೇದ, ಮಂತ್ರಗಳನ್ನು ಕಲಿಯುತ್ತಾರೆ. ಇದು ಪುರಾತನ ಕಾಲದಿಂದಲೂ ನಡೆದು ಬಂದಿದೆ. ನಮ್ಮ ಸಂಪ್ರದಾಯದಲ್ಲಿ ಹೋಮ, ಹವನ ಮುಖ್ಯ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.

    ಸಂಘದ ರಾಜ್ಯಾಧ್ಯಕ್ಷ ಗಣೇಶ ಆರಾಧ್ಯ ಮಾತನಾಡಿ, ಕೆಲವೆಡೆ ಅಂತ್ಯಕ್ರಿಯೆಗೆ ಮಾತ್ರ ವೀರಶೈವ ಅರ್ಚಕರನ್ನು ಕರೆಯುತ್ತಾರೆ. ಉಳಿದೆಲ್ಲ ಕೆಲಸಕ್ಕೆ ಬೇರೆಯವರು ಬೇಕು ಎನ್ನುತ್ತಾರೆ. ಇದು ನಮ್ಮನ್ನು ವೃತ್ತಿಯಿಂದ ವಿಮುಖ ಮಾಡುವಂತೆ ಮಾಡಿದೆ. ಅಪಾರ ಜ್ಞಾನ, ಪಾಂಡಿತ್ಯ ಹೊಂದಿರುವ ಹಿಂದು ಸಮಾಜದ ಭಾಗವಾಗಿರುವ ನಮ್ಮ ಸಂಘದ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡಲಾಗುವುದು ಎಂದರು. ಬಿಕನಳ್ಳಿಯ ಸಿದ್ಧಲಿಂಗ ಸ್ವಾಮೀಜಿ, ನಿಡಶೇಸಿಯ ಗುರು ಬಸವೇಶ್ವರ ಶಿವಾಚಾರ್ಯರು, ಕರಿಬಸವೇಶ್ವರ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು. ವಕೀಲ ವಿ.ಎಂ. ಭೂಸನೂರಮಠ, ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ, ಪತ್ರೆಪ್ಪ ಪಲ್ಲೇದ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಸದಸ್ಯರಾದ ಗುರುರಾಜ ಹಲಗೇರಿ, ಬಸಯ್ಯ ಹಿರೇಮಠ, ಅಶ್ವಿನಿ ಗದಗಿನಮಠ, ಮುತ್ತುರಾಜ ಕುಷ್ಟಗಿ, ಕೆ.ಚನ್ನಗೌಡ, ರಾಜ್ಯ ಯುವ ಘಟಕ ಅಧ್ಯಕ್ಷ ಪ್ರಕಾಶ, ಶಿವಕುಮಾರ ಪಾವಲಿಶೆಟ್ಟರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts