More

    ಸರ್ವರನ್ನೊಳಗೊಂಡ ಪಕ್ಷ ಕಾಂಗ್ರೆಸ್: ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿಕೆ ; ಬಿಜೆಪಿ ತೊರೆದು ಕೈ ಹಿಡಿದ ಮುಖಂಡರು

    ಕೊಪ್ಪಳ: ಎಲ್ಲ ವರ್ಗದವರಿಗೂ ಸಮಾನ ಅವಕಾಶ ನೀಡುವ ಏಕೈಕ ಪಕ್ಷ ಕಾಂಗ್ರೆಸ್. ಬಿಜೆಪಿ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಸೇರಿರುವ ಮುಖಂಡರ ಸೇವೆ ಗುರುತಿಸಿ ಸೂಕ್ತ ಸ್ಥಾನಮಾನ ನೀಡಲಾಗುವುದು. ನಿಮ್ಮೊಂದಿಗೆ ನಾವಿದ್ದು, ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸೋಣ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

    ನಗರದ ಶಾಸಕರ ನಿವಾಸದಲ್ಲಿ ಭಾನುವಾರ ಬಿಜೆಪಿ ಮುಖಂಡರಾದ ತೋಟಪ್ಪ ಕಾಮನೂರು, ಸಂಗನಗೌಡ ಪಾಟೀಲ್ ಹಾಗೂ ಇತರ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಮಾತನಾಡಿದರು. ರಾಜ್ಯ, ಕೇಂದ್ರ ಸರ್ಕಾರ ದುರಾಡಳಿತಕ್ಕೆ ಬಿಜೆಪಿಯ ಹಲವು ನಾಯಕರು ಬೇಸರಗೊಂಡು ಕಾಂಗ್ರೆಸ್ ಸೇರುತ್ತಿದ್ದಾರೆ. ಗೋವಾದಲ್ಲೂ ಹಲವರು ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಹೆಚ್ಚು ಮತ ಪಡೆದಿದೆ. ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಕಳೆದೆರಡು ಅವಧಿಯಲ್ಲಿ ಕ್ಷೇತ್ರದಲ್ಲಿ ನೀರಾವರಿ, ಮೆಡಿಕಲ್ ಕಾಲೇಜು, ಕೆರೆ ತುಂಬಿಸುವ ಯೋಜನೆ ಅನುಷ್ಠಾನ ಮಾಡಿದ್ದೇವೆ. ಮುಂದೆಯೂ ಎಲ್ಲ ಸಮುದಾಯದ ನಾಯಕರನ್ನು ಒಳಗೊಂಡು ಅಭಿವೃದ್ಧಿ ಮಾಡೋಣ ಎಂದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿಯವರು ಎಷ್ಟು ನೋವು ಕೊಟ್ಟಿದ್ದಾರೆಂಬುದು ಇಂದು ಕಾಂಗ್ರೆಸ್ ಸೇರಿದವರ ಕಣ್ಣೀರಿನಲ್ಲಿ ತಿಳಿಯುತ್ತದೆ. ಯಾವುದೇ ಕಾರಣಕ್ಕೂ ಯಾರೂ ಹೆದರಬೇಕಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ ಎಂದರು.

    ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರು, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಮುಖಂಡರಾದ ಎಚ್.ಎಲ್.ಹಿರೇಗೌಡರ್, ಗೂಳಪ್ಪ ಹಲಗೇರಿ, ರಾಜಶೇಖರ್ ಹಿಟ್ನಾಳ್, ಹನುಮರೆಡ್ಡಿ ಹಂಗನಕಟ್ಟಿ, ಗಾಳೆಪ್ಪ ಪೂಜಾರ್, ಎಂ.ಕಾಟನ್ ಪಾಷಾ, ನವೋದಯ ವಿರೂಪಣ್ಣ ಇತರರಿದ್ದರು.

    ಭಾವುಕರಾದ ತೋಟಪ್ಪ
    ಕಳೆದ ಮೂರು ದಶಕದಿಂದ ಬಿಜೆಪಿಯಲ್ಲಿದ್ದ ಗಾಣಿಗ ಸಮುದಾಯದ ಮುಖಂಡ ತೋಟಪ್ಪ ಕಾಮನೂರು ಅನೇಕ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದರು. ತಮ್ಮ ಭಾಷಣದಲ್ಲಿ ಭಾವುಕರಾಗಿ ವೇದಿಕೆ ಮೇಲೆ ಕಣ್ಣೀರು ಹಾಕಿದರು. ಕಾಯಕರ್ತರನ್ನು ಬೆಳೆಸುವುದು ಹೇಗೆಂದು ಕಾಂಗ್ರೆಸ್ ನೋಡಿ ಕಲಿಯಬೇಕು. ನನ್ನೊಂದಿಗೆ ಬಂದಿರುವ ಎಲ್ಲರಿಗೂ ಸಮಾನ ಜವಾಬ್ದಾರಿ ನೀಡಿ. ನಾವು ಕೆಲಸ ಮಾಡಲು ಸಿದ್ಧ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts