More

    ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲು ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್.ಶಂಕರ್ ಸೂಚನೆ

    ಕೊಪ್ಪಳ: ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್.ಶಂಕರ್ ಹೇಳಿದರು. ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಪಂ ಸದಸ್ಯನಿಂದ ಹಿಡಿದು, ಪ್ರಧಾನ ಮಂತ್ರಿವರೆಗೆ ಎಲ್ಲರೂ ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಾರ್ಯಕ್ರಮ, ಚಟುವಟಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರು ಸ್ಮಾರ್ಟ ಪೋನ್ ಹೊಂದಿದ್ದು, ಅಂತರ್ಜಾಲ ಬಳಕೆ ಹೆಚ್ಚಾಗಿದೆ. ಕೋವಿಡ್-19 ಸಂಕಷ್ಟ ಪರಿಸ್ಥಿತಿಯಲ್ಲಿ ಎಷ್ಟೋ ಸಭೆ ಸಮಾರಂಭಗಳು, ವಿದ್ಯಾರ್ಥಿಗಳ ತರಗತಿಗಳು ಆನ್‌ಲೈನ್‌ನಲ್ಲಿ ನಡೆದಿವೆ. ಈ ತಂತ್ರಜ್ಞಾನದ ಬಳಕೆಯನ್ನು ಕಾರ್ಯಕರ್ತರು ಸರಿಯಾದ ರೀತಿ ಬಳಕೆ ಮಾಡಿ ಪಕ್ಷದ ಕಾರ್ಯಕ್ರಮಗಳನ್ನು ಧನಾತ್ಮಕವಾಗಿ ಪ್ರಚುರಪಡಿಸಿ ಎಂದು ಸಲಹೆ ನೀಡಿದರು.

    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಗೌಡ ಹಲಗೇರಿ ಅಧ್ಯಕ್ಷತೆವಹಿಸಿದ್ದರು, ಬಿಜೆಪಿ ಸಾಮಾಜಿಕ ಜಾಲತಾಣದ ರಾಜ್ಯ ಸಹ ಸಂಚಾಲಕ ಪ್ರಶಾಂತ ಜಾಧವ್, ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ನಾಗೂರು, ಜಿಲ್ಲಾ ಸಂಚಾಲಕ ಅಮೀತ ಜೋಷಿ, ಸಹ ಸಂಚಾಲಕ ಅನು ಶಿಲ್ಪಿ, ಜಿ.ಪಂ ಕೆಡಿಪಿ ಸದಸ್ಯ ಅಮರೇಶ ಕರಡಿ, ರಾಷ್ಟ್ರೀಯ ಪರಿಷತ ಸದಸ್ಯ ಸಿ.ವಿ ಚಂದ್ರಶೇಖರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣವರ, ಜಿಲ್ಲಾ ಮಾಧ್ಯಮ ಸಂಚಾಲಕ ಬಿ.ಗಿರೀಶಾನಂದ ಸೇರಿ ಮಂಡಲ ಸಾಮಾಜಿಕ ಜಾಲತಾಣದ ಸಂಚಾಲಕ, ಸಹ ಸಂಚಾಲಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts