More

    ಮೀಸಲಾತಿ ನೀಡದಿದ್ದರೆ ಹೋರಾಟ ಮುಂದುವರಿಕೆ; ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ

    ಕೊಪ್ಪಳ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಅ.1ರೊಳಗೆ ಸರ್ಕಾರ 2ಎ ಮೀಸಲಾತಿ ಪ್ರಕಟಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 6 ತಿಂಗಳೊಳಗೆ ಮೀಸಲು ನೀಡುವ ಬಗ್ಗೆ ಸರ್ಕಾರವೇ ಭರವಸೆ ನೀಡಿತ್ತು. ಗಡುವು ಮುಗಿದಿರುವುದರಿಂದ ಅಭಿಯಾನ ಹಮ್ಮಿಕೊಂಡಿದ್ದೇವೆ. ಬೆಂಗಳೂರಿಗೆ ಕೈಗೊಂಡಿದ್ದ ಪಾದಯಾತ್ರೆ ಮೂಲಕ ಸಮುದಯದ ಜನರು ಒಟ್ಟಾಗಿದ್ದಾರೆ. ಗೌಡ ಹಾಗೂ ದೀಕ್ಷ ಪಂಚಮಸಾಲಿಗಳೂ ಜಾಗೃತರಾಗಿದ್ದಾರೆ ಎಂದರು.

    ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಸಮುದಾಯದ ಋಣವಿದೆ. ಅದನ್ನು ಅವರೂ ಒಪ್ಪಿಕೊಂಡಿದ್ದಾರೆ. ಅ.1ರೊಳಗೆ ಪಂಚಮಸಾಲಿಗೆ 2ಎ ಮೀಸಲು ಹಾಗೂ ಇತರ ಲಿಂಗಾಯತ ಸಮುದಾಯಗಳಿಗೆ ಕೇಂದ್ರದಲ್ಲಿ ಒಬಿಸಿ ಸ್ಥಾನಮಾನಕ್ಕೆ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ. ಸಮುದಾಯದ ಮೂರನೇ ಪೀಠದ ಅಸ್ತಿತ್ವ ಹೋರಾಟದ ಮೇಲೆ ಪ್ರಭಾವ ಬೀರುವುದಿಲ್ಲ. ಪಂಚಮಸಾಲಿ ನಾಯಕರು, ಜನಪ್ರತಿನಿಧಿಗಳು ಯಾರೂ ಮೀಸಲಾತಿ ಹೋರಾಟ ತಿರಸ್ಕರಿಸಿಲ್ಲ. ಸಮುದಾಯದ ಶಾಸಕರಿಗೆ ಸದನ ಮುಗಿಯುವುದರೊಳಗೆ ಮೀಸಲು ವಿಷಯ ಚರ್ಚಿಸಲು ತಿಳಿಸಲಾಗಿದೆ. ಇಲ್ಲಿ ರಾಜಕೀಯಕ್ಕಿಂತ ಸಮುದಾಯಕ್ಕೆ ಮೀಸಲಾತಿ ಮುಖ್ಯ ಎಂದು ಸ್ವಾಮೀಜಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts